ಗುರುವಾರ , ಜೂಲೈ 2, 2020
24 °C

ಆನೆ ಹತ್ಯೆ ಪ್ರಕರಣ | ತನಿಖೆ ಚುರುಕು: ಒಬ್ಬನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಪಾಲಕ್ಕಾಡ್‌: ಇಲ್ಲಿ ನಡೆದ ಗರ್ಭಿಣಿ ಕಾಡಾನೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಶುಕ್ರವಾರ ಬಂಧಿಸಲಾಗಿದೆ. 

ಬಂಧಿತನನ್ನು ವಿಲ್ಸನ್‌ ಎಂದು ಗುರುತಿಸಲಾಗಿದೆ.

‘ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು, ಅವರ ಬಂಧನಕ್ಕೂ ಪ್ರಯತ್ನ ಮುಂದುವರಿದಿದೆ’ ಎಂದು ಕೇರಳದ ಅರಣ್ಯ ಸಚಿವ ಕೆ.ರಾಜು ಸುದ್ದಿಗಾರರಿಗೆ ತಿಳಿಸಿದರು.

ಎರಡು ವಾರ ಆಹಾರ ಸೇವಿಸಿರಲಿಲ್ಲ: ಮೃತಪಟ್ಟ ಕಾಡಾನೆಯ ಬಾಯಿಯಲ್ಲಿ ದೊಡ್ಡ ಗಾಯವಿತ್ತು. ಸ್ಫೋಟದಿಂದಲೇ ಇದು ಸಂಭವಿಸಿರಬಹುದು. ಇದರಿಂದಾದ ನೋವಿನ ಕಾರಣದಿಂದ ಎರಡು ವಾರಗಳ ಕಾಲ ನೀರು ಕುಡಿಯಲಾಗದೆ, ಏನನ್ನೂ ತಿನ್ನಲಾಗದ ಸ್ಥಿತಿಯಲ್ಲಿ ಆನೆಯಿತ್ತು. ಬಾಯಿಯೊಳಗೆ ಸೋಂಕಾಗಿ ಹುಳುಗಳು ತುಂಬಿದ್ದವು. ನಿತ್ರಾಣವಾದ ಆನೆ ನೀರಿನಲ್ಲೇ ಮುಳುಗಿದೆ. ಆನೆಯ ಶ್ವಾಸಕೋಶದೊಳಗೆ ನೀರು ಪ್ರವೇಶಿಸಿದ್ದು ಆನೆ ತಕ್ಷಣವೇ ಸಾಯಲು ಕಾರಣ ಎಂದು ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಆನೆಯ ಮೃತದೇಹದಲ್ಲಿ ಗುಂಡು ಅಥವಾ ಕಬ್ಬಿಣದ ವಸ್ತುಗಳಾಗಲಿ ಪತ್ತೆಯಾಗಿಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿದೆ. 

 ಇದನ್ನೂ ಓದಿ: ತಿರುವನಂತಪುರ | ಅನಾನಸ್‌ ಜತೆ ಪಟಾಕಿ ಸ್ಫೋಟದಿಂದ ಆನೆ ಸಾವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು