ಶುಕ್ರವಾರ, ಡಿಸೆಂಬರ್ 13, 2019
26 °C

ಒಸಾಮಾ ಬಿನ್‌ ಲಾಡೆನ್‌ ಸಾವು!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಒಸಾಮಾ ಬಿನ್‌ ಲಾಡೆನ್‌ ಎಂದಾಕ್ಷಣ ಅಮೆರಿಕದ ವಿಶ್ವ ವ್ಯಾಪಾರ ಸಂಘಟನೆ ಕಟ್ಟಡದ ಮೇಲಿನ ದಾಳಿ ನೆನಪಿಗೆ ಬರುತ್ತದೆ. ಈತನನ್ನು ಅಮೆರಿಕವೇ ಮಟ್ಟಹಾಕಿದ್ದು ಇತಿಹಾಸ.

ಆದರೆ ಅಸ್ಸಾಂನಲ್ಲಿದ್ದ ಒಸಾಮಾ ಬಿನ್‌ ಲಾಡೆನ್‌ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. ಅಂದ ಹಾಗೆ ಈ ಲಾಡೆನ್‌ ಉಗ್ರನಲ್ಲ ಬದಲಿಗೆ ಆನೆ. ಭಾರಿ ಉಪಟಳ ಮಾಡುತ್ತಿದ್ದ ಆನೆಗೆ ಈ ಹೆಸರಿಡಲಾಗಿತ್ತು. ಇತ್ತೀಚೆಗಷ್ಟೇ ಇದನ್ನು ಸೆರೆಹಿಡಿಯಲಾಗಿತ್ತು. 

ಅಸ್ಸಾಂನ ಗೋಪಾಲಪುರದಲ್ಲಿ ಅಕ್ಟೋಬರ್‌ನಲ್ಲಿ ಐವರನ್ನು ಲಾಡೆನ್‌ ಸಾಯಿಸಿದ ನಂತರ ಇದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಒರಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ ಇದನ್ನು ಇಡಲಾಗಿತ್ತು. ಭಾನುವಾರ ಬೆಳಿಗ್ಗೆ ಲಾಡೆನ್‌ ಕೊನೆಯಿಸಿರೆಳೆದಿದೆ. ಮೃತಪಡಲು ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. 

 

ಪ್ರತಿಕ್ರಿಯಿಸಿ (+)