ಸೋಮವಾರ, ಡಿಸೆಂಬರ್ 9, 2019
25 °C

ಆರ್ಥಿಕ ಸಲಹಾ ಮಂಡಳಿ ಸದಸ್ಯ ಸ್ಥಾನಕ್ಕೆ ಸುರ್ಜಿತ್‌ ಭಲ್ಲ ರಾಜೀನಾಮೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಆರ್ಥಿಕ ತಜ್ಞ ಹಾಗೂ ಅಂಕಣಕಾರ ಸುರ್ಜಿತ್‌ ಭಲ್ಲ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯಲ್ಲಿನ ಸದಸ್ಯ ಸ್ಥಾನಕ್ಕೆ ಡಿಸೆಂಬರ್‌ 1ರಂದೇ ರಾಜೀನಾಮೆ ನೀಡಿರುವುದಾಗಿ ಸುರ್ಜಿತ್ ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ಅವರ ರಾಜೀನಾಮೆಯನ್ನು ಪ್ರಧಾನಿ ಅಂಗೀಕರಿಸಿದ್ದಾರೆ.

’ಬೇರೆ ಸಂಸ್ಥೆಗೆ ಆರ್ಥಿಕ ಸಲಹೆಗಾರರಾಗಿ ಹೋಗುತ್ತಿರುವುದರಿಂದ ಮಂಡಳಿಯಲ್ಲಿನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀದ್ದೇನೆ‘ ಎಂದು ಪತ್ರದಲ್ಲಿ ವಿವರಿಸಿದ್ದಾಗಿ ಪ್ರಧಾನಿ ಕಾರ್ಯಾಲಯದ ವಕ್ತಾರ ತಿಳಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಅದರಲ್ಲೂ ಪ್ರಧಾನಿಗೆ ಆರ್ಥಿಕತೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಲಹೆ ನೀಡಲು ಸ್ಥಾಪಿಸಿರುವ ಸ್ವತಂತ್ರ ಸಂಸ್ಥೆಯೇ ಪ್ರಧಾನಿ ಆರ್ಥಿಕ ಸಲಹಾ ಮಂಡಳಿ.  
 
ಬಿಬೇಕ್ ದೇಬ್ರಾಯ್ ನೇತೃತ್ವದ ಆರ್ಥಿಕ ಸಲಹಾ ಮಂಡಳಿಯಲ್ಲಿ ಪ್ರಸ್ತುತ ಆರ್ಥಿಕ ತಜ್ಞರಾದ ರಥಿನ್ ರಾಯ್, ಅಶಿಮಾ ಗೋಯಲ್ ಹಾಗೂ ಶಮಿಕಾ ರವಿ ಸದಸ್ಯರಾಗಿದ್ದಾರೆ.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು