ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ವಿದ್ಯಾರ್ಥಿಗಳ ದೂರುಆಲಿಕೆ, ಪರಿಹಾರಕ್ಕೆ ಕಟ್ಟುನಿಟ್ಟಿನ ಕ್ರಮ

Last Updated 12 ಆಗಸ್ಟ್ 2019, 18:54 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯಾರ್ಥಿ ಕುಂದುಕೊರತೆ ಪರಿಹಾರ ಸಮಿತಿ (ಎಸ್‌ಜಿಆರ್‌ಸಿ) ಶಿಫಾರಸುಗಳ ಜಾರಿಗೆ ವಿಫಲವಾಗುವ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ಇತರೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದಾಗುವ ಸಂಭವವಿದೆ.

ಮಾನ್ಯತೆ ರದ್ದು ಜೊತೆಗೆ ಅನುದಾನ ತಡೆಹಿಡಿಯಲು ಅವಕಾಶ ನೀಡುವ ಅಖಿಲ ಭಾರ ತಾಂತ್ರಿಕ ಶಿಕ್ಷಣ ಮಂಡಳಿ (ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ) ನಿಯಮಗಳು 2019’ ಕರಡನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ರೂಪಿಸಿದೆ.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದ ಕರಡು ನಿಯಮಗಳ ಕುರಿತು ಸಾರ್ವಜನಿಕರು ಆಗಸ್ಟ್‌ 20ರ ಒಳಗೆ ಅಭಿಪ್ರಾಯ, ಸಲಹೆಗಳನ್ನು ನೀಡಬಹುದಾಗಿದೆ.

ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ ಅಥವಾ ಒಂಬುಡ್ಸ್‌ಮನ್‌ನ ಶಿಫಾರಸು, ಸಲಹೆ ಜಾರಿಗೆ ವಿಫಲವಾಗುವ ಸಂಸ್ಥೆಗಳ ವಿರುದ್ಧ ಕ್ರಮಜರುಗಿಸಲು ಈ ನಿಯಮಾವಳಿಯು ಎಐಸಿಟಿಇಗೆ ಅವಕಾಶ ಕಲ್ಪಿಸಲಿದೆ.

ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ನಿರ್ಬಂಧ, ಮಂಡಳಿಯ ಯಾವುದೇ ಸಹಕಾರ, ವಿಶೇಷ ನೆರವು ಪಡೆಯಲು ಅರ್ಹವಲ್ಲ ಎಂದು ಮಂಡಳಿಯ ವೆಬ್‌ಸೈಟ್ ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಸಂಸ್ಥೆಯನ್ನು ಅನರ್ಹಗೊಳಿಸಲು ಉದ್ದೇಶಿತ ನಿಯಮಗಳಲ್ಲಿ ಅವಕಾಶವಿದೆ.

ನಿಯಮಗಳ ಅನುಸಾರ, ಎಐಸಿಟಿಇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಕುಂದುಕೊರತೆ ಪರಿಹಾರ ಸಮಿತಿ (ಎಸ್‌ಜಿಆರ್‌ಸಿ) ರಚಿಸಬೇಕು, ಬರುವ ದೂರುಗಳನ್ನು ಸಂಬಂಧಿಸಿದ ಸಮಿತಿಯು ಪರಿಶೀಲಿಸಬೇಕು. ಕೈಗೊಂಡ ಕ್ರಮ ಕುರತಿಉ 15 ದಿನದಲ್ಲಿ ಎಐಸಿಟಿಇಗೆ ವರದಿ ಕಳುಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT