ಗುರುವಾರ , ಸೆಪ್ಟೆಂಬರ್ 19, 2019
21 °C

ವಿಮಾನದಲ್ಲಿ ದೋಷ: ವಿಡಿಯೊ ಹಂಚಿಕೊಂಡ ರಾಹುಲ್ ಗಾಂಧಿ

Published:
Updated:

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರಕ್ಕಾಗಿ ಬಿಹಾರಕ್ಕೆ ತೆರಳುತ್ತಿದ್ದ ವೇಳೆ ಲಘು ವಿಮಾನದಲ್ಲಿ ದೋಷ ಕಾಣಿಸಿಕೊಂಡಿದ್ದು, ದೆಹಲಿಗೆ ವಾಪಸ್‌ ಆಗಿದ್ದಾರೆ. ಹೀಗಾಗಿ ನಿಗದಿತ ಕಾರ್ಯಕ್ರಮಗಳು ತಡವಾಗಲಿವೆ ಎಂದು ರಾಹುಲ್‌ ತಿಳಿಸಿದ್ದಾರೆ.

ಈ ಸಂಬಂಧ ತಾಂತ್ರಿಕ ದೋಷ ವಿಡಿಯೊವನ್ನು ಹಂಚಿಕೊಂಡಿರುವ ರಾಹುಲ್‌ ಸಮಸ್ಯೆ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಬಿಹಾರದ ಪಟ್ನಾಗೆ ತೆರಳಬೇಕಿದ್ದ ನಮ್ಮ ವಿಮಾನದ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿತು. ಹೀಗಾಗಿ ನಾವು ದೆಹಲಿಗೆ ವಾಪಸ್‌ ಆಗಬೇಕಾಯಿತು. ಬಿಹಾರದ ಸಮಸ್ತಿಪುರ್‌, ಒಡಿಶಾದ ಬಾಲಾಸೋರ್‌ ಹಾಗೂ ಮಹಾರಾಷ್ಟ್ರದ ಸಂಗಾಮ್ನೆರ್‌ನಲ್ಲಿ ನಡೆಯಬೇಕಿದ್ದ ಸಭೆಗಳು ತಡವಾಗಲಿವೆ. ಅಡೆತಡೆಗಾಗಿ ಕ್ಷಮೆಯಿರಲಿ’ ಎಂದು ಮನವಿ ಮಾಡಿದ್ದಾರೆ.

ವಿಡಿಯೊದಲ್ಲಿ ವಿಮಾನ ಚಾಲನೆ ಮಾಡಲು ಪೈಲಟ್‌ಗಳು ಪ್ರಯತ್ನಿಸುತ‌್ತಿರುವುದು ಹಾಗೂ ರಾಹುಲ್‌, ಇತರ ಕೆಲವು ನಾಯಕರು ಇರುವುದು ಕಾಣುತ್ತದೆ.

Post Comments (+)