ಸುಳ್ಳು ಸುದ್ದಿ ತಡೆಗೆ ಸಂಘಟನೆ

7
ಎಂಜಿನಿಯರ್‌, ವಕೀಲನ ವಿನೂತನ ಪ್ರಯತ್ನ; ಪತ್ರಕರ್ತರ ಆಕ್ಷೇಪ

ಸುಳ್ಳು ಸುದ್ದಿ ತಡೆಗೆ ಸಂಘಟನೆ

Published:
Updated:

ಮುಂಬೈ: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಪೂರ್ವಗ್ರಹ ಮತ್ತು ಸುಳ್ಳಿನಿಂದ ಕೂಡಿದ ಸುದ್ದಿ, ವರದಿಗಳನ್ನು ತಡೆಯಲು ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಇಬ್ಬರು ಯುವಕರು ಸಂಘಟನೆಯೊಂದನ್ನು ಅಸ್ತಿತ್ವಕ್ಕೆ ತಂದಿದ್ದಾರೆ.‌

ಮುಂಬೈನ ಏರೊನಾಟಿಕಲ್ ಎಂಜಿನಿಯರ್ ವಿಪುಲ್ ಸಕ್ಸೇನಾ ಮತ್ತು ದೆಹಲಿಯ ವಕೀಲ ವಿಭರ್‌ ಆನಂದ್‌ ಅವರು ರಚಿಸಿರುವ ‘India Against Bias Media’ (IABM) ಎಂಬ ಹೆಸರಿನ ಈ ಸಂಘಟನೆಗೆ ಪತ್ರಕರ್ತರಿಂದ ಆಕ್ಷೇಪ ವ್ಯಕ್ತವಾಗಿದೆ. ಇದು ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಕಿರುಕುಳ ನೀಡಿ ಬೆದರಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ‘ದೇ‌ಶದ ಧಾರ್ಮಿಕ ಮತ್ತು ಸಾಮಾಜಿಕ ಬಂಧವನ್ನು ನಾಶ ಮಾಡುವ ಉದ್ದೇಶ ಹೊಂದಿರುವ ವರದಿಗಳನ್ನು ಪ್ರಸಾರ ಮಾಡುವವರ ವಿರುದ್ಧ ನಮ್ಮ ಸಂಘಟನೆ ದೂರು ದಾಖಲಿಸುತ್ತದೆ’ ಎಂದು ಸಕ್ಸೇನಾ ತಿಳಿಸಿದ್ದಾರೆ.

ಈ ಇಬ್ಬರೂ ತಮ್ಮ ಸಂಘಟನೆಗಾಗಿ ಎರಡು ವರ್ಷಗಳಿಂದಲೂ ಕೆಲಸ ಮಾಡಿದ್ದಾರೆ. ಆದರೆ ತಮ್ಮ ವೇದಿಕೆಗೆ ವಾರದ ಹಿಂದೆ ಟ್ವಿಟರ್‌ನಲ್ಲಿ ಚಾಲನೆ ನೀಡಿದ್ದಾರೆ. ಇದಾದ ನಂತರ ಇಬ್ಬರೂ 24ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವುಗಳಲ್ಲಿ ಹೆಚ್ಚಿನವು ದೇಶದಾದ್ಯಂತ ಹಲವು ಜನರ ವಿರುದ್ಧದ ರಾಷ್ಟ್ರದ್ರೋಹ ಪ್ರಕರಣಗಳಾಗಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !