ಜ.10ರ ಒಳಗಾಗಿ ಬಿಡಾಡಿ ದನಗಳಿಗೆ ಆಶ್ರಯ: ಡಿಸಿಗಳಿಗೆ ಯೋಗಿ ಆದಿತ್ಯನಾಥ್‌ ಸೂಚನೆ

7

ಜ.10ರ ಒಳಗಾಗಿ ಬಿಡಾಡಿ ದನಗಳಿಗೆ ಆಶ್ರಯ: ಡಿಸಿಗಳಿಗೆ ಯೋಗಿ ಆದಿತ್ಯನಾಥ್‌ ಸೂಚನೆ

Published:
Updated:
Prajavani

ಲಖನೌ: ‘ಬಿಡಾಡಿ ಜಾನುವಾರುಗಳನ್ನು ಜನವರಿ 10ರ ಒಳಗಾಗಿ ಗೋಶಾಲೆಗಳಿಗೆ ಸ್ಥಳಾಂತರಿಸಬೇಕು’ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.

ಬಿಡಾಡಿ ದನಗಳಿಂದ ಜಮೀನಿನಲ್ಲಿ ಬೆಳೆಗಳಿಗೂ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದ ಬಳಿಕ ವಿಡಿಯೊ ಕಾನ್ಫರೆನ್ಸ್‌ ಮೂಲಕ ರಾಜ್ಯದ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ, ಈ ಕ್ರಮ ತೆಗೆದುಕೊಂಡಿದ್ದಾರೆ.

ಗ್ರಾಮೀಣ ಭಾಗದ ಶಾಲೆಗಳು ದನಗಳನ್ನು ತುಂಬುವ ದೊಡ್ಡಿಗಳಾನ್ನಾಗಿ ಮಾಡುತ್ತಿರುವವರ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಬಿಡಾಡಿ ಜಾನುವಾರುಗಳಿಗೆ ಕಡ್ಡಾಯವಾಗಿ ಆಶ್ರಯ ಕಲ್ಪಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ನಗರಪ್ರದೇಶಗಳಲ್ಲಿ ಬಿಡಾಡಿ ದನಗಳಿಂದ ಅಪಘಾತಗಳಾಗುತ್ತಿವೆ, ಗ್ರಾಮೀಣ ಭಾಗದಲ್ಲಿ ಬೆಳೆನಾಶ ಮಾಡುತ್ತಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ ತಲೆದೋರುತ್ತಿದೆ. ಇಂತಹ ಸಮಸ್ಯೆ ಪುನಾರವರ್ತನೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆದಿತ್ಯನಾಥ್‌ ಸೂಚನೆ ನೀಡಿದರು.

ಸೆಸ್‌ ಹೇರಿಕೆ: ಬಿಡಾಡಿ ಜಾನುವಾರುಗಳಿಗೆ ಪ್ರತಿ ಜಿಲ್ಲೆಗಳಲ್ಲಿ ಆಶ್ರಯ ತಾಣಮತ್ತು ಅವುಗಳ ನಿರ್ವಹಣಾ ವೆಚ್ಚಕ್ಕಾಗಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 0.5 ಸೆಸ್‌ ವಿಧಿಸಿದೆ.

ಜಾನುವಾರುಗಳ ಆಶ್ರಯ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ಕಳೆದ ವಿತ್ತವರ್ಷ ₹95 ಕೋಟಿ ಹಾಗೂ ಈ ವಿತ್ತವರ್ಷದಲ್ಲಿ ₹100 ಕೋಟಿ ನೆರವು ನೀಡಿದೆ.  ಪ್ರತೀ ಗ್ರಾಮಪಂಚಾಯಿತಿ, ಮುನ್ಸಿಪಾಲಿಟಿ, ನಗರ ಪಂಚಾಯಿತಿ, ಪಾಲಿಕೆ ವ್ಯಾಪ್ತಿಯಲ್ಲಿ ಆಶ್ರಯತಾಣ ತೆರೆಯಲಾಗುತ್ತಿದ್ದು, ಪ್ರತಿ ಕೇಂದ್ರದಲ್ಲಿ 1 ಸಾವಿರ ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಿದೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !