ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪಕ್ಷಗಳು ಸೇನೆಯನ್ನು ಅಪಮಾನ ಮಾಡಿವೆ, ಜನರು ಇದನ್ನು ಕ್ಷಮಿಸುವುದಿಲ್ಲ: ಮೋದಿ 

Last Updated 22 ಮಾರ್ಚ್ 2019, 13:27 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್‍ನಲ್ಲಿ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದವಾಯುದಾಳಿ ಬಗ್ಗೆ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಪ್ರಶ್ನಿಸಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರಣಿಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರ ಮಾರ್ಗದರ್ಶಿ ಮತ್ತು ವಿಶ್ವಾಸಾರ್ಹ ಸಲಹೆಗಾರನಾದವ್ಯಕ್ತಿ ಭಾರತದ ಸಶಸ್ತ್ರ ಪಡೆಯನ್ನು ಅಪಮಾನ ಮಾಡುವ ಮೂಲಕ ಕಾಂಗ್ರೆಸ್ ಪರವಾಗಿ ಈಗಾಗಲೇ ಪಾಕಿಸ್ತಾನ ರಾಷ್ಟ್ರೀಯ ದಿನ ಆಚರಣೆ ಶುರು ಮಾಡಿದ್ದಾರೆ. ನಾಚಿಕೆಗೇಡು!

ಕಾಂಗ್ರೆಸ್‍ನ ಕುಟುಂಬ ರಾಜಕಾರಣದ ನಿಷ್ಠಾವಂತ ಆಸ್ಥಾನಿಕ ದೇಶದ ಜನರಿಗೆ ಗೊತ್ತಿರುವ ವಿಷಯವನ್ನು ಕೇಳುತ್ತಿದ್ದಾರೆ.ಇದು ನವ ಭಾರತ. ಉಗ್ರರಿಗೆ ಅವರದ್ದೇ ಆದ ಭಾಷೆಯಲ್ಲಿ ನಾವು ಉತ್ತರಿಸುತ್ತೇವೆ.

ವಿಪಕ್ಷಗಳು ನಮ್ಮ ಸೇನಾಪಡೆಯನ್ನು ಮತ್ತೊಮ್ಮೆ ಅಪಮಾನ ಮಾಡಿವೆ.ಈ ರೀತಿ ಹೇಳಿಕೆ ನೀಡಿರುವ ವಿಪಕ್ಷ ನಾಯಕರನ್ನು ನೀವೂ ಪ್ರಶ್ನಿಸಿ ಎಂದು ದೇಶದ ಜನರಲ್ಲಿ ನಾನು ವಿನಂತಿಸುತ್ತೇನೆ.

ವಿಪಕ್ಷಗಳ ಈ ಮಾತನ್ನು 130 ಕೋಟಿ ಭಾರತೀಯರು ಮರೆಯುವುದೂ ಇಲ್ಲ, ಕ್ಷಮಿಸುವುದೂ ಇಲ್ಲ ಎಂದು ಹೇಳಿ.ನಾವು ನಮ್ಮ ಸೇನೆಯ ಪರ ದೃಢವಾಗಿ ನಿಲ್ಲುತ್ತೇವೆಎಂದು ಮೋದಿ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT