ಸೋಮವಾರ, ಜೂನ್ 21, 2021
29 °C

ಜೈಲಿನಿಂದ ಮೂವರು ಆರೋಪಿಗಳು ಪರಾರಿ: ತನಿಖೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ: ಮೂವರು ವಿಚಾರಣಾಧೀನ ಕೈದಿಗಳು ಅಮೃತಸರ ಕೇಂದ್ರೀಯ ಕಾರಾಗೃಹದಿಂದ ಪರಾರಿಯಾಗಿದ್ದಾರೆ.

ಒಬ್ಬ ಆರೋಪಿಯನ್ನ ಅತ್ಯಾಚಾರ  ಮತ್ತು ಇಬ್ಬರು ಆರೋಪಿಗಳನ್ನು ಕಳ್ಳತನ ಮತ್ತು  ಡಕಾಯಿತಿಯ ಆರೋಪದಲ್ಲಿ ಬಂಧಿಸಲಾಗಿತ್ತು. ಆರೋಪಿಗಳು ಶನಿವಾರ ಮತ್ತು ಭಾನುವಾರ ರಾತ್ರಿ ಜೈಲಿನ ಗೋಡೆಯನ್ನು ಕೊರೆದು ಪರಾರಿಯಾಗಿದ್ದಾರೆ.

ಆರೋಪಿಗಳು ಜೈಲಿನ  16 ಅಡಿ ಗೋಡೆಯನ್ನು ಒಬ್ಬರ ಮೇಲೆ ಒಬ್ಬರು ನಿಂತು ಹತ್ತಿದ್ದಾರೆ. 21 ಅಡಿ ಎತ್ತರವಿರುವ ಜೈಲಿನ  ಗೋಡೆಯ ಮೇಲೆ ಮೊಳೆಗಳನ್ನು ಹೊಡೆದು ಅದನ್ನು ಏಣಿಯ ಹಾಗೆ ಬಳಸಿ ಪರಾರಿಯಾಗಿದ್ದಾರೆ.

" ಜೈಲಿನ ನಂ 10 ಭದ್ರತಾ ಗೋಪುರದ ಸಮೀಪದಿಂದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ, ಅದು ಸಿಸಿಟಿವಿ ವ್ಯಾಪ್ತಿಯಲ್ಲಿ ಇರಲಿಲ್ಲ" ಎಂದು ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ.

ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳಿಗೆ ಹೊರಗಿನಿಂದ ಸಹಾಯ ಲಭಿಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿನ ಜೈಲುಗಳ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿ ಅದನ್ನು ಬಲ ಪಡಿಸಲು ಮುಂದಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು