ಕಾರಿನ ಮೇಲೆ ಟೋಲ್‌ ಸಿಬ್ಬಂದಿ;100 ಕಿ.ಮೀ ವೇಗ, ಐದಾರು ಕಿ.ಮೀ ನುಗ್ಗಿದ ಕಾರು

ಸೋಮವಾರ, ಏಪ್ರಿಲ್ 22, 2019
31 °C
ಟೋಲ್‌ ಗಲಾಟೆ

ಕಾರಿನ ಮೇಲೆ ಟೋಲ್‌ ಸಿಬ್ಬಂದಿ;100 ಕಿ.ಮೀ ವೇಗ, ಐದಾರು ಕಿ.ಮೀ ನುಗ್ಗಿದ ಕಾರು

Published:
Updated:

ಗುರುಗ್ರಾಮ: ಮುಂದಿನ ಸಂಚಾರಕ್ಕೆ ಟೋಲ್‌ ಪಾವತಿಸುವಂತೆ ಕೇಳಿದ ಸಿಬ್ಬಂದಿನ್ನು ಕಾರಿನ ಬಾನೆಟ್‌ ಮೇಲೆ ಸುಮಾರು 5–6 ಕಿ.ಮೀ ವರೆಗೂ ಹೊತ್ತೊಯ್ದಿರುವುದು ವಿಡಿಯೊದಲ್ಲಿ ದಾಖಲಾಗಿದೆ. 

ಕಾರಿನ ಬಾನೆಟ್‌ ಹಿಡಿದು ಮುಂದೆ ಸಾಗದಂತೆ ನಿಲ್ಲಿಸಲು ಪ್ರಯತ್ನಿಸಿದ ಸಿಬ್ಬಂದಿಯನ್ನು ಲೆಕ್ಕಿಸದೆ, ಗಂಟೆಗೆ 100 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿಕೊಂಡು ನುಗ್ಗಿದ್ದಾನೆ. 

ಟೋಲ್‌ ಸಿಬ್ಬಂದಿ ಪ್ರಕಾರ, ಕಾರಿನ ಡ್ರೈವರ್‌ ‘ನೀನು ನನ್ನ ಕಾರು ತಡೆಯುವೆಯೇ? ಪೊಲೀಸರೂ ಸಹ ನನ್ನ ಕಾರು ತಡೆಯಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾಗಿ ಹೇಳಿದ್ದಾರೆ. 

ಟೋಲ್‌ ತಡೆಯನ್ನು ಸೀಳಿಕೊಂಡು ನುಗ್ಗುವ ಟಯೋಟಾ ಇನೋವಾ ಕಾರನ್ನು ನಿಲ್ಲಿಸಲು ಟೋಲ್‌ ಸಿಬ್ಬಂದಿ ಸಾಕಷ್ಟು ಪ್ರಯತ್ನಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಇದೇ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ಕಾರಿನ ಬಾನೆಟ್‌ ಹಿಡಿದಿದ್ದಾರೆ. ಯಾವುದನ್ನೂ ಲೆಕ್ಕಿಸದೆಯೇ ಕಾರಿನ ಚಾಲಕ ಅತ್ಯಂತ ವೇಗವಾಗಿ ಕಾರು ಚಲಾಯಿಸಿಕೊಂಡು ಮುನ್ನುಗ್ಗಿದ್ದಾನೆ. 

‘ಸುಮಾರು 5–6 ಕಿ.ಮೀ ವರೆಗೂ ಗಂಟೆಗೆ 100 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿಕೊಂಡು ನುಗ್ಗಿದ. ನಾನು ಕಾರಿನ ಬಾನೆಟ್‌ ಹಿಡಿದು ಕಾರಿಗೆ ಅಪ್ಪಿಕೊಂಡಿದ್ದೆ..’ ಎಂದು ಟೋಲ್‌ ಸಿಬ್ಬಂದಿ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 3

  Amused
 • 2

  Sad
 • 0

  Frustrated
 • 11

  Angry

Comments:

0 comments

Write the first review for this !