ಮಹಿಳೆಯರು ಉತ್ತಮ ವ್ಯವಸ್ಥಾಪಕರು: ಸುಮಿತ್ರಾ ಶ್ಲಾಘನೆ

7

ಮಹಿಳೆಯರು ಉತ್ತಮ ವ್ಯವಸ್ಥಾಪಕರು: ಸುಮಿತ್ರಾ ಶ್ಲಾಘನೆ

Published:
Updated:
Deccan Herald

ಚಂಡೀಗಡ: ಮಹಿಳೆಯರು ಮ್ಯಾನೇಜ್‌ಮೆಂಟ್‌ ಪದವಿ ಪಡೆಯದಿದ್ದರೂ ‘ಉತ್ತಮ ವ್ಯವಸ್ಥಾಪಕರು’; ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಅವರಿಗಿದೆ ಎಂದು ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಶ್ಲಾಘಿಸಿದ್ದಾರೆ.

ಭಾರತ್‌ ವಿಕಾಸ್‌ ಪರಿಷತ್‌ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಕಾರ್ಮಿಕರ ಸಭೆಯಲ್ಲಿ ಮಾತನಾಡಿದ ಅವರು, ‘ಎಷ್ಟೋ ವರ್ಷಗಳಿಂದ ಅಲ್ಲೇ ಇದ್ದವರಂತೆ, ಗಂಡನ ಮನೆಯವರೆಲ್ಲರ ಬೇಕು ಬೇಡಗಳನ್ನು ಅರಿತು ನಡೆಯುವುದೇ ಮಹಿಳೆಯ ಸಾಮರ್ಥ್ಯಕ್ಕೆ ಉದಾಹರಣೆ. ಆದರೆ ತಮ್ಮ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ಅರಿವಿರುವುದಿಲ್ಲ. ಗೃಹಿಣಿಯಾಗಿರುವುದರಿಂದ ನಾನು ಏನೂ ಆಗಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಇಂತಹ ಭಾವನೆಯನ್ನು ಮನಸ್ಸಿನಿಂದ ಮೊದಲು ತೆಗೆದುಹಾಕಬೇಕು ಎಂದರು.

ಯಾತ್ರಾರ್ಥಿಗಳ ಬಗ್ಗೆ ಮಾತನಾಡಿದ ಸುಮಿತ್ರಾ, ಹೆಲಿಕಾಪ್ಟರ್‌ನಂತಹ ಆಧುನಿಕ ಸೌಲಭ್ಯದಮೂಲಕ ದೇವಾಲಯಗಳನ್ನು ತಲುಪುವುದರಿಂದ ನಿಜವಾದ ಸಂತುಷ್ಟಿ ಸಿಗುವುದಿಲ್ಲ. ‘ವಿಐಪಿ ದರ್ಶನ’ದಲ್ಲಿ ದೇವರನ್ನು ನೋಡಿಬಂದೆವು ಎಂದುಕೊಳ್ಳುತ್ತೇವೆ. ಆದರೆ ಅದು ನಿಜವಾದ ದರ್ಶನ ಅಲ್ಲ ಎಂದರು.

ದೇವರ ದರ್ಶನಕ್ಕೆ ಕಷ್ಟಪಟ್ಟು ಹೋಗಬೇಕು. ಯಾವಾಗ ವಿಐಪಿ ಸೌಲಭ್ಯದ ಮೂಲಕ ದರ್ಶನ ಮಾಡಿ ಬರುತ್ತೇನೋ ಆಗ, ಅಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಹೋದವರಿಗೆ ಸಿಕ್ಕಂತಹ ಆಶೀರ್ವಾದ ನನಗೆ ಸಿಗಲಿಲ್ಲ ಎಂದೇ ನನ್ನ ಮನಸ್ಸಿಗೆ ಭಾಸವಾಗುತ್ತದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !