ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಮೂರನೇ ಹಂತ ಪೂರ್ಣ

Last Updated 23 ಏಪ್ರಿಲ್ 2019, 20:08 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯಲ್ಲಿ ಮೂರನೇ ಹಂತದ ಮತದಾನವು ಮಂಗಳವಾರ ಪೂರ್ಣಗೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮತ್ತು ಕೆಲವು ರಾಜ್ಯಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ತಾಂತ್ರಿ ತೊಂದರೆ ಎದುರಿಸಿದ ಹೊರತಾಗಿ ಮತದಾನವು ಶಾಂತಿಯುತವಾಗಿ ನಡೆದಿದೆ. ಮೂರನೇ ಹಂತದೊಂದಿಗೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಮತದಾನ ಮುಗಿದಿದೆ.

–––––

ಮೋದಿ ತಾಯಿ, ಪತ್ನಿ ಮತದಾನ

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ (95) ಅವರುಗುಜರಾತಿನ ರಾಯಸಣ್ ಗ್ರಾಮದಲ್ಲಿ ಮತದಾನ ಮಾಡಿದರು. ಅವರು ತಮ್ಮ ಕಿರಿಯ ಪುತ್ರ ಪಂಕಜ್ ಮೋದಿ ಜೊತೆ ವಾಸಿಸುತ್ತಿದ್ದಾರೆ. ಗ್ರಾಮ ‍ಪಂಚಾಯಿತಿಯ ಮತಗಟ್ಟೆಗೆ ಪುತ್ರ ಹಾಗೂ ಕುಟುಂಬ ಸದಸ್ಯರ ಜೊತೆ ತೆರಳಿದ ಅವರು ಮತ ಚಲಾಯಿಸಿದರು.

ಮೋದಿ ಅವರ ಪತ್ನಿ ಜಶೋದಾ ಬೆನ್ ಅವರು ಗುಜರಾತ್‌ನ ಉಂಜಾ ಎಂಬಲ್ಲಿ ಮತದಾನ ಮಾಡಿದರು. ‘ಮೋದಿ ಅವರು ದೇಶಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಇನ್ನಷ್ಟು ದೇಶಸೇವೆ ಮಾಡಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ವಿವಿಧೆಡೆ...

l ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ. ಕಾಂಗ್ರೆಸ್ ಕಾರ್ಯಕರ್ತನ ಸಾವು, ಹಲವರಿಗೆ ಗಾಯ. ಮಾಲ್ಡಾದಲ್ಲೂ ಹಿಂಸಾಚಾರ

l ಕೇರಳದಲ್ಲಿ ಮೂವರ ಸಾವು. 65 ವರ್ಷದ ವಿಜಯಿ ಎಂಬ ಮಹಿಳೆ ಪನೂರ್‌ ಸಮೀಪದ ಚೊಕ್ಲಿ ರಾಮ ವಿಲಾಸಂ ಶಾಲೆಯ ಮತಗಟ್ಟೆಯಲ್ಲಿ ಸಾಲಿನಲ್ಲಿ ನಿಂತಿದ್ದಾಗ ಕುಸಿದುಬಿದ್ದರು. ಪಟ್ಟನಂತಿಟ್ಟ ಜಿಲ್ಲೆಯಲ್ಲಿ ಮತದಾನಕ್ಕೆ ಬಂದಿದ್ದ 80 ವರ್ಷದ ಪಾಪಚ್ಚನ್ ಎಂಬುವರು ಕುಸಿದು ಬಿದ್ದು ಮತಗಟ್ಟೆಯಲ್ಲೇ ಮೃತಪಟ್ಟದರು. ವೇಣುಗೋಪಾಲ್ (72) ಎಂಬುವರು ಮತ ಚಲಾಯಿಸಿ ಮನೆಗೆ ಬಂದ ಬಳಿಕ ಅಸ್ವಸ್ಥರಾದರು. ಅವರನ್ನು ತಳಿಪರಂಬದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟರು

l ಕೇರಳ, ಅಸ್ಸಾಂ ಮತ್ತು ಉತ್ತರ ಪ್ರದೇಶದ ಹಲವೆಡೆ ಕೈಕೊಟ್ಟ ಮತಯಂತ್ರಗಳು. ಮತದಾನ ವಿಳಂಬ

l ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಲೋಕಸಭಾ ಕ್ಷೇತ್ರದಲ್ಲಿ ನೀರಸ ಮತದಾನ. ಮನೆಗಳಿಂದ ಹೊರಬರದ ಮತದಾರರು. ಕೇವಲ ಶೇ 13.16ರಷ್ಟು ಮತದಾನವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT