ಗುರುವಾರ , ಆಗಸ್ಟ್ 22, 2019
26 °C

ಬಿಜೆಪಿ ಶಾಸಕ ಕುಲ್‌ದೀಪ್ ವಿರುದ್ಧ ಅಪಹರಣ, ಅತ್ಯಾಚಾರ ಪ್ರಕರಣ ದಾಖಲು 

Published:
Updated:

ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ 52ರ ಹರೆಯದ ಬಿಜೆಪಿಯಿಂದ ಉಚ್ಛಾಟಿತ ಶಾಸಕ ಕುಲ್‌ದೀಪ್ ಸೆಂಗಾರ್ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು ಆತ್ಯಾಚಾರ ಪ್ರಕರಣ ನಡೆದಾಗ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದ ಕಾರಣ ಸೆಂಗಾರ್ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನೂ ದಾಖಲಿಸಲಾಗಿದೆ.

ಇದನ್ನೂ ಓದಿ: ಉನ್ನಾವ್‌ ಸಂತ್ರಸ್ತೆಗೆ ನ್ಯಾಯ ಸಿಗಲಿ ಪ್ರಭಾವಿಗಳ ‘ಆಟ’ ನಡೆಯದಿರಲಿ

ಸೆಂಗಾರ್ ವಿರುದ್ಧವಿರುವ ಎಲ್ಲ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ಕಳೆದ ವಾರ ಆದೇಶಿಸಿತ್ತು.

ಇತ್ತ ಅತ್ಯಾಚಾರ ಸಂತ್ರಸ್ತೆ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
ಸಂತ್ರಸ್ತೆಯನ್ನು ಹತ್ಯೆ ಮಾಡುವುದಕ್ಕಾಗಿ ಸೆಂಗಾರ್ ಕಾರು ಡಿಕ್ಕಿ ಹೊಡೆಸಿದ್ದರು ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ.

ಸಂತ್ರಸ್ತೆ ಸಂಚರಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು, ಈ ಅಪಘಾತದಲ್ಲಿ ಸಂತ್ರಸ್ತೆಯ  ಇಬ್ಬರು ಸಂಬಂಧಿಕರು ಮೃತರಾಗಿದ್ದು, ಸಂತ್ರಸ್ತೆ ಮತ್ತು ನ್ಯಾಯವಾದಿಗೆ ಗಂಭೀರ ಗಾಯಗಳಾಗಿತ್ತು.

ಇದನ್ನೂ ಓದಿ: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರು ಅಪಘಾತ: ಪರಿಸ್ಥಿತಿ ಗಂಭೀರ

ಶಾಸಕರ ಮನೆಗೆ ಹೋಗುವಂತೆ ಆಮಿಷ ಒಡ್ಡಿದ ಆರೋಪದಲ್ಲಿಯೂ ಸೆಂಗಾರ್ ಮತ್ತು ಅವರ ಆಪ್ತ ಶಶಿ ಸಿಂಗ್ ವಿರುದ್ಧವೂ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿದೆ.

ಉನ್ನಾವ್ ಅತ್ಯಾಚಾರ ಪ್ರಕರಣ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೊಲೀಸರ ಬೇಜವಾಬ್ದಾರಿ ಬಗ್ಗೆ ಕಿಡಿ ಕಾರಿತ್ತು. ಅತ್ಯಾಚಾರ ಆರೋಪ ಎದುರಿಸುತ್ತಿದ್ದರೂ ಪಕ್ಷದಿಂದ ಉಚ್ಛಾಟನೆ ಯಾಕೆ ಮಾಡಿಲ್ಲ ಎಂದು ವಿಪಕ್ಷಗಳು ಪ್ರಶ್ನಿಸಿದ್ದು,  ಜನರ ಒತ್ತಾಯಕ್ಕೆ  ಮಣಿದು ಬಿಜೆಪಿ ಸೆಂಗಾರ್‌ನ್ನು ಪಕ್ಷದಿಂದ ಉಚ್ಛಾಟಿಸಿತ್ತು.

ಇದನ್ನೂ ಓದಿ: 
ಉನ್ನಾವ್ ಅತ್ಯಾಚಾರ: ಆರೋಪ ಹೊರಿಸಿದ್ದಕ್ಕಾಗಿ ಬೆಲೆ ತೆರಬೇಕಾಯಿತೇ ಸಂತ್ರಸ್ತೆ?
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ:ಬಿಜೆಪಿ ಶಾಸಕನ ವಿರುದ್ಧ ಕೇಸು ದಾಖಲು
ಬಿಜೆಪಿ ಶಾಸಕ ಅತ್ಯಾಚಾರವೆಸಗಿದ್ದರೆ ಅದನ್ನು ನೀವು ಪ್ರಶ್ನಿಸಬಾರದು: ರಾಹುಲ್ ಗಾಂಧಿ

ಸಂತ್ರಸ್ತೆ ಇದ್ದ ಕಾರು ಅಪಘಾತ ‌| ಬಿಜೆಪಿ ಶಾಸಕನ ವಿರುದ್ಧ ಕೊಲೆ ಪ್ರಕರಣ ದಾಖಲು
ಸಂತ್ರಸ್ತೆಗೆ ಅಪಘಾತ: ಸದನದಲ್ಲಿ ಗದ್ದಲ
ನನ್ನ ಮನೆಗೆ ಬಂದು ಬೆದರಿಕೆಯೊಡ್ಡಿದ್ದರು: ಉನ್ನಾವ್ ಸಂತ್ರಸ್ತೆಯಿಂದ ಸಿಜೆಐಗೆ ಪತ್ರ
ಬಹಳ ಹಿಂದೆಯೇ ಕುಲ್‌ದೀಪ್ ಸೆಂಗಾರ್‌ನ್ನು ಪಕ್ಷದಿಂದ ಅಮಾನತು ಮಾಡಿದ್ದೆವು: ಬಿಜೆಪಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣದಲ್ಲಿ ಬಿಜೆಪಿ ಕೈವಾಡ? 
ಅತ್ಯಾಚಾರ ಸಂತ್ರಸ್ತೆ ಕಾರಿಗೆ ಲಾರಿ ಡಿಕ್ಕಿ: ಅಪಘಾತವಲ್ಲ, ಕೊಲೆ ಪ್ರಕರಣ ದಾಖಲು

ಉನ್ನಾವ್ ಅತ್ಯಾಚಾರ ಆರೋಪಿ ಶಾಸಕ ಕುಲ್‌ದೀಪ್ ಸೆಂಗಾರ್‌ನ್ನು ಉಚ್ಛಾಟಿಸಿದ ಬಿಜೆಪಿ

 

Post Comments (+)