ಶನಿವಾರ, ನವೆಂಬರ್ 23, 2019
17 °C

ಅಬಕಾರಿ ಅಧಿಕಾರಿ ₹100 ಕೋಟಿ ಒಡೆಯ!

Published:
Updated:

ಭೋಪಾಲ್: ಇಂದೋರ್‌ನ ಸಹಾಯಕ ಅಬಕಾರಿ ಆಯುಕ್ತ ಅಲೋಕ್ ಖರೆ ಅವರಿಗೆ ಸೇರಿದ ₹100 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಖರೆ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಮಂಗಳವಾರ ಏಕಕಾಲಕ್ಕೆ ಪೊಲೀಸರು ಶೋಧ ನಡೆಸಿದರು. 

10ಕ್ಕೂ ಹೆಚ್ಚು ಐಷಾರಾಮಿ ಕಾರುಗಳು, ₹15 ಲಕ್ಷ ನಗದು, 3 ಕೆ.ಜಿ. ಚಿನ್ನ, ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಚತ್ರಪುರದಲ್ಲಿ ಹಲವು ಕೋಟಿ ರೂಪಾಯಿ ಬೆಲೆಬಾಳುವ ಬಂಗಲೆ, 57 ಎಕರೆಯಲ್ಲಿ ಎರಡು ಫಾರ್ಮ್‌ಹೌಸ್ ಇವೆ. 

ಖರೆ ಅವರಿಗೆ ಸೇರಿದ ಇನ್ನಷ್ಟು ಆಸ್ತಿಪಾಸ್ತಿಗಳ ಬಗ್ಗೆ ಮಾಹಿತಿ ಕಲೆಹಾಕಕಾಗುತ್ತಿದ್ದು, ಆಸ್ತಿಯ ಮೌಲ್ಯ ಇನ್ನಷ್ಟು ಹೆಚ್ಚಾಗಬಹುದು ಎಂದು ಲೋಕಾಯುಕ್ತ ಡಿವೈಎಸ್‌ಪಿ ನವೀನ್ ಅವಸ್ತಿ ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)