ಮಂಗಳವಾರ, ನವೆಂಬರ್ 12, 2019
25 °C

ಇಸ್ರೇಲ್‌ ಚುನಾವಣೆ: ಮತ್ತೊಮ್ಮೆ ಪ್ರಧಾನಿ ಆಗುವರೇ ನೇತನ್ಯಾಹು?

Published:
Updated:

ಜೆರುಸಲೇಂ (ರಾಯಿಟರ್ಸ್‌): ಇಸ್ರೇಲ್‌ ಸಂಸತ್ತಿಗೆ ಇಂದು (ಮಂಗಳವಾರ) ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಆರು ತಿಂಗಳಿನಲ್ಲಿ ಎರಡನೇ ಬಾರಿ ಜನರು ಪ್ರಧಾನಿ ಆಯ್ಕೆಗೆ ಮತ ಚಲಾಯಿಸಲಿದ್ದಾರೆ. 

ಪ್ರಧಾನಿ ನೇತನ್ಯಾಹು ಐದನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದು ದಾಖಲೆ ಬರೆಯಲಿದ್ದಾರೆಯೇ ಅಥವಾ ಅವರ ಸುದೀರ್ಘ ಆಡಳಿತ ಕೊನೆ ಕಾಣಲಿದ್ದೆಯೇ ಎಂಬ ಕುತೂಹಲವಿದೆ.

ಹಲವು ಹಗರಣಗಳು, ಬಿಕ್ಕಟ್ಟುಗಳು ಮತ್ತು ಸಂಘರ್ಷಗಳ ನಡುವೆಯೂ ಚುನಾವಣೆಗಳಲ್ಲಿ ನಿರಂತರವಾಗಿ ನೇತನ್ಯಾಹು ಜಯ ಸಾಧಿಸುತ್ತಿರುವುದು ಗಮನಾರ್ಹವಾಗಿದೆ.

ಯಾವುದೇ ಪಕ್ಷ ಸಂಪೂರ್ಣ ಬಹುಮತ ಗಳಿಸುವುದಿಲ್ಲ. ಹೀಗಾಗಿ ನೇತನ್ಯಾಹು ನೇತೃತ್ವದ ಲಿಕುಡ್‌ ಮತ್ತು ಬ್ಲ್ಯೂ ಅಂಡ್‌ ವೈಟ್‌ ಪಕ್ಷ ಸಮ್ಮಿಶ್ರ ಸರ್ಕಾರ ರಚಿಸುವ ಸಂಭವವಿದೆ ಎಂದು ಚುನಾವಣಾ ಸಮೀಕ್ಷೆ ತಿಳಿಸಿದೆ.

ಪ್ರತಿಕ್ರಿಯಿಸಿ (+)