ಬುಧವಾರ, ಜೂನ್ 23, 2021
26 °C

ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಫಡಣವೀಸ್ ಆಯ್ಕೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮುಂಬೈ: ಬಿಜೆಪಿಯ ಮಹಾರಾಷ್ಟ್ರ ಘಟಕದ ಶಾಸಕಾಂಗ ಪಕ್ಷದ ನಾಯಕನಾಗಿ ದೇವೇಂದ್ರ ಫಡಣವೀಸ್ ಮತ್ತೊಂದು ಅವಧಿಗೆ ಆಯ್ಕೆಯಾದರು.

ಬಿಜೆಪಿ ನೂತನ ಶಾಸಕರು ಬುಧವಾರ ಸಭೆ ಸೇರಿ ಫಡಣವೀಸ್ ಅವರನ್ನು ಆಯ್ಕೆ ಮಾಡಿದರು. ಕೇಂದ್ರ ಸಚಿವರ ನರೇಂದ್ರ ಸಿಂಗ್ ತೋಮರ್ ಮತ್ತು ಪಕ್ಷದ ಉಪಾಧ್ಯಕ್ಷ ಅವಿನಾಶ್ ರೈ ಖನ್ನಾ ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರಾಗಿದ್ದರು.

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಫಡಣವೀಸ್, ‘ಭಿನ್ನಮತಗಳನ್ನು ಸರಿಪಡಿಸಿ ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ’ ಎಂದರು.

ಇದನ್ನೂ ಓದಿ: ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ: ಫಡಣವೀಸ್

ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾವೊಂದು ಪಕ್ಷವೂ ಬಹುಮತ ಪಡೆದಿಲ್ಲ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಮತ್ತು ಶಿವಸೇನಾ 56 ಸ್ಥಾನ ಗಳಿಸಿವೆ. ಫಲಿತಾಂಶದ ಬೆನ್ನಲ್ಲೇ 50:50 ಅಧಿಕಾರ ಹಂಚಿಕೆ ಮತ್ತು ಎರಡೂವರೆ ವರ್ಷ ಅವಧಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಶಿವಸೇನಾ ಪಟ್ಟುಹಿಡಿದಿತ್ತು. ಆದರೆ, ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಫಡಣವೀಸ್ ಹೇಳಿದ್ದರು.

ಇದನ್ನೂ ಓದಿ: ‘ಶಿವಸೇನಾಗೆ ಸಿ.ಎಂ ಹುದ್ದೆ ಇಲ್ಲ’

‘ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವಾಗಲೇ 50:50ರಂತೆ ಅಧಿಕಾರ ಹಂಚಿ ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು’ ಎಂದು ಶಿವಸೇನಾ ಹೇಳಿತ್ತು. ಇದನ್ನು ಅಲ್ಲಗಳೆದಿದ್ದ ಫಡಣವೀಸ್, ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಬಗ್ಗೆ ಶಿವಸೇನಾಗೆ ಭರವಸೆ ನೀಡಿಲ್ಲ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಶಿವಸೇನಾ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ಲೋಕಸಭೆ ಚುನಾವಣೆಗೂ ಮುನ್ನ ಮಾಧ್ಯಮಗೋಷ್ಠಿ ಒಂದರಲ್ಲಿ ದೇವೇಂದ್ರ ಫಡಣವೀಸ್ ಅವರು ಮಾತನಾಡಿದ್ದ ದೃಶ್ಯವಿರುವ ವಿಡಿಯೊ ಅದಾಗಿದೆ. ‘ಮತ್ತೆ ಅಧಿಕಾರಕ್ಕೆ ಬಂದರೆ, ಅಧಿಕಾರ ಮತ್ತು ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ದೇವೇಂದ್ರ ಫಡಣವೀಸ್ ಅವರು ಮರಾಠಿಯಲ್ಲಿ ಹೇಳಿದ್ದನ್ನು ವಿಡಿಯೊ ಒಳಗೊಂಡಿತ್ತು.

ಇನ್ನಷ್ಟು...

ರಾಜ್ಯಪಾಲರನ್ನು ಭೇಟಿಮಾಡಿದ ನಾಯಕರು

ಶಿವಸೇನೆ ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಳ್ಳಬೇಕು: ರಾಮ್‌ದಾಸ್ ಅಠಾವಲೆ

ಕೂಡಲೇ ಸರ್ಕಾರ ರಚಿಸಲು ಇಲ್ಲಿ ದುಷ್ಯಂತನಿಲ್ಲ: ಶಿವಸೇನಾ ನಾಯಕನ ಮಾರ್ಮಿಕ ಮಾತು

ದುಷ್ಯಂತ್ ಯಾರೆಂಬುದಾದರೂ ಗೊತ್ತಲ್ವಾ, ಶಿವಸೇನಾಗೆ ಜೆಜೆಪಿ ನಾಯಕ ತಿರುಗೇಟು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು