ರಾಜ್ಯದಲ್ಲೂ ರೇಡಿಯೊ ಜಾಗೃತಿ

7

ರಾಜ್ಯದಲ್ಲೂ ರೇಡಿಯೊ ಜಾಗೃತಿ

Published:
Updated:

ನವದೆಹಲಿ: ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಾಟ್ಸ್‌ ಆ್ಯಪ್‌ ಕಂಪನಿಯು ರೇಡಿಯೊ ಮೂಲಕ ನಡೆಸುತ್ತಿರುವ ಎರಡನೇ ಹಂತದ ಜಾಗೃತಿ ಕಾರ್ಯಕ್ರಮವು ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ನಡೆಯಲಿದೆ.

‘ಬುಧವಾರದಿಂದ (ಸೆ. 5) ಎರಡನೇ ಹಂತದ ಪ್ರಚಾರ ಕಾರ್ಯಕ್ರಮ ಆರಂಭಿಸಲಾಗಿದೆ. ಹತ್ತು ರಾಜ್ಯಗಳ 83 ಆಕಾಶವಾಣಿ ಕೇಂದ್ರಗಳ ಮೂಲಕ ಈ ಪ್ರಚಾರ ನಡೆಯಲಿದೆ. ಕನ್ನಡ, ಮರಾಠಿ, ತೆಲುಗು, ತಮಿಳು, ಬಂಗಾಳಿ, ಗುಜರಾತಿ, ಅಸ್ಸಾಮಿ ಹಾಗೂ ಒರಿಯಾ ಭಾಷೆಗಳಲ್ಲಿ ಈ ಪ್ರಚಾರ ನಡೆಯಲಿದೆ’ ಎಂದು ವಾಟ್ಸ್‌ ಆ್ಯಪ್‌ ತಿಳಿಸಿದೆ.

‘ಸುಳ್ಳು ಮಾಹಿತಿ ಹಾಗೂ ಸುಳ್ಳು ಸುದ್ದಿಗಳ ಸೂಕ್ಷ್ಮತೆ ಅರಿತುಕೊಂಡು ಸಮಾಜಕ್ಕೆ ಸರಿಯಾದ ಮಾಹಿತಿ ನೀಡುವ ಬಗ್ಗೆ ಪ್ರಚಾರ ಕಾರ್ಯಕ್ರಮದಲ್ಲಿ ಬಳಕೆದಾರರಿಗೆ ತಿಳಿಸಲಾಗುವುದು’ ಎಂದು ವಾಟ್ಸ್‌ ಆ್ಯಪ್‌ ಹೇಳಿದೆ.

ಸುಳ್ಳು ಮತ್ತು ಬೇಜವಾಬ್ದಾರಿ ಸಂದೇಶಗಳು ಹರಿದಾಡಿ, ಗುಂಪು ಹತ್ಯೆಗೆ ಕಾರಣವಾಗುತ್ತಿರುವುದಕ್ಕೆ ವಾಟ್ಸ್‌ ಆ್ಯಪ್‌ ಕಂಪನಿ ತೀವ್ರ ಟೀಕೆಗೊಳಗಾಗಿತ್ತು. ದುಷ್ಕೃತ್ಯಗಳಿಗೆ ಅವಕಾಶ ಕೊಡುವ ವೇದಿಕೆಯಾಗಬಾರದು ಎಂದು ಕಂಪನಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು. ಸುಳ್ಳು ಸಂದೇಶಗಳಿಗೆ ಕಡಿವಾಣ ಹಾಕುವುದಾಗಿ ವಾಟ್ಸ್‌ ಆ್ಯಪ್‌ ಕಂಪನಿಯೂ ಹೇಳಿತ್ತು. ಅದರ ಅಂಗವಾಗಿ ಮೊದಲನೇ ಹಂತದ ಪ್ರಚಾರ ಕಾರ್ಯಕ್ರಮವನ್ನು 7 ರಾಜ್ಯಗಳಲ್ಲಿ ಆಗಸ್ಟ್‌ 29 ರಿಂದ ಆರಂಭಿಸಿದೆ.

ಸುಳ್ಳು ಸುದ್ದಿ ಹರಿದಾಡಿದ್ದರಿಂದ ವಾಟ್ಸ್‌ ಆ್ಯಪ್‌ ಕಂಪನಿಗೆ ಎರಡು ನೋಟಿಸು ಜಾರಿ ಮಾಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಂಪನಿಯು, ಸಂದೇಶಗಳನ್ನು ಹರಿಬಿಡುವುದಕ್ಕೂ ಕಡಿವಾಣ ಹಾಕಿದೆ.

‘ಸಂದೇಶಗಳ ವಿಶ್ವಾಸಾರ್ಹತೆ ತಿಳಿದುಕೊಂಡ ನಂತರವೇ ಅದನ್ನು ಹರಿಬಿಡಬೇಕು. ಸಂದೇಶಗಳನ್ನು ಹರಿಬಿಡುವಾಗ ಬಳಕೆದಾರರು ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದು ವಾಟ್ಸ್‌ ಆ್ಯಪ್‌ ಹೇಳಿದೆ.

**

ವಾಟ್ಸ್‌ಆ್ಯಪ್‌ ಬಳಕೆದಾರರು

150 ಕೋಟಿ: ಜಗತ್ತಿನಾದ್ಯಂತ ಇರುವ ಬಳಕೆದಾರರು

20 ಕೋಟಿ: ಭಾರತದಲ್ಲಿ ಬಳಕೆದಾರರ ಸಂಖ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !