ಫೇಕ್‌ನ್ಯೂಸ್ ತಡೆಗೆ 700 ಯುಆರ್‌ಎಲ್‌ ನಿರ್ಬಂಧ

7

ಫೇಕ್‌ನ್ಯೂಸ್ ತಡೆಗೆ 700 ಯುಆರ್‌ಎಲ್‌ ನಿರ್ಬಂಧ

Published:
Updated:
Deccan Herald

ನವದೆಹಲಿ: ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಸುಮಾರು 700 ಯುಆರ್‌ಎಲ್‌(ವೆಬ್‌ ಅಡ್ರೆಸ್‌)ಗಳನ್ನು ನಿರ್ಬಂಧಿಸಿರುವುದಾಗಿ ಐಟಿ ಸಚಿವ ರವಿಶಂಕರ್‌ ಪ್ರಸಾದ್ ತಿಳಿಸಿದ್ದಾರೆ.  

ವದಂತಿ ಮತ್ತು ಸುಳ್ಳು ಸುದ್ದಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡದಂತೆ ತಡೆಯುವ ನಿಟ್ಟಿನಲ್ಲಿ ತಾಂತ್ರಿಕ ಪರಿಹಾರ ಕಂಡುಕೊಳ್ಳಲು ಸರ್ಕಾರ ಫೇಸ್‌ಬುಕ್‌ ಮತ್ತು ಟ್ವಿಟರ್ ಸೇರಿ ಹಲವು ಸಂಸ್ಥೆಗಳಿಗೆ ಸೂಚಿಸಿತ್ತು. ಈ ಸಂಬಂಧ ಪ್ರಸಕ್ತ ವರ್ಷ 700 ಯುಆರ್‌ಎಲ್‌ಗಳಿಗೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತಡೆಯೊಡ್ಡಿವೆ ಎಂದು ಶುಕ್ರವಾರ ಸಚಿವ ರವಿಶಂಕರ್‌ ಪ್ರಸಾದ್‌ ರಾಜ್ಯಸಭೆಗೆ ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅವಕಾಶಗಳ ಅನುಸಾರ ಯುಆರ್‌ಎಲ್‌ಗಳನ್ನು ನಿರ್ಬಂಧಿಸಲಾಗಿದೆ. ಜೂನ್‌ವರೆಗೂ ಫೇಸ್‌ಬುಕ್‌ 499, ಯುಟ್ಯೂಬ್‌ 57, ಟ್ವಿಟರ್‌ 88, ಇನ್‌ಸ್ಟಾಗ್ರಾಂ 25 ಹಾಗೂ ಟಂಬ್ಲರ್‌ 28 ಯುಆರ್‌ಗಳನ್ನು ತಡೆಹಿಡಿದಿವೆ. 

ಕೆಲವು ಗುಂಪು ಹಲ್ಲೆ ಪ್ರಕರಣ ಹಾಗೂ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಹರಡಿರುವ ಸುಳ್ಳು ಸುದ್ದಿಗಳಿಗೂ ಸಂಪರ್ಕ ಇರುವ ಕುರಿತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ರಾಜ್ಯಸಭೆಯಲ್ಲಿ ಪ್ರಶ್ನಿಸಲಾಗಿತ್ತು.  

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !