ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ; ಅಂತರ್‌ ಸಚಿವಾಲಯ ಸಮಿತಿ ರಚನೆ

Last Updated 5 ನವೆಂಬರ್ 2018, 19:56 IST
ಅಕ್ಷರ ಗಾತ್ರ

ಭುವನೇಶ್ವರ: ಬೆಂಬಲ ಬೆಲೆ, ಪಿಂಚಣಿಗೆ ಬೇಡಿಕೆ ಇರಿಸಿ ಪ್ರತಿಭಟನೆ ನಡೆಸುತ್ತಿರುವರೈತರ ಬೇಡಿಕೆಗಳನ್ನು ಚರ್ಚಿಸಲು ಅಂತರ್‌ಸಚಿವಾಲಯ ಸಮಿತಿ ರಚನೆ ಮಾಡುವುದಾಗಿ ಒಡಿಶಾ ಸರ್ಕಾರ ಘೋಷಿಸಿದೆ.

ಆದರೆ‘ನವ ನಿರ್ಮಾಣ ಕೃಷಿಕ ಸಂಘಟನೆ’ ವೇದಿಕೆಯಡಿ ಪ್ರತಿಭಟನೆ ನಡೆಸುತ್ತಿರುವ ರೈತರು ಸಮಿತಿಯನ್ನು ತಿರಸ್ಕರಿಸಿದ್ದಾರೆ.

ರಾಜ್ಯದ ವಿವಿಧೆಡೆಯಿಂದ ಹೊರಟು ಭುವನೇಶ್ವರಸಮೀಪಿಸಿದರೈತರ ‘ಪಾದಯಾತ್ರೆ’ಗೆ ನಗರ ಪ್ರವೇಶಕ್ಕೆ ಅವಕಾಶ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

‘ಸರ್ಕಾರ ನಮ್ಮನ್ನು ಬಂಧಿಸಲಿ. ನಮಗೆ ಪ್ರವೇಶ ನಿರಾಕರಿಸಿದ ಸ್ಥಳದಿಂದ ಒಂದಿಂಚೂ ಕದಲುವುದಿಲ್ಲ. ಅಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎನ್‌ಎನ್‌ಕೆಎಸ್ ಸಂಚಾಲಕ ಅಕ್ಷಯ ಕುಮಾರ್ ತಿಳಿಸಿದ್ದಾರೆ.ರೈತರು ಸರ್ಕಾರದಲ್ಲಿ ವಿಶ್ವಾಸ ಇರಿಸಿ ತಮ್ಮ ಗ್ರಾಮಗಳಿಗೆ ಮರಳಬೇಕು ಎಂದುಸಮಿತಿಯ ನೇತೃತ್ವ ವಹಿಸಲಿರುವ ಸಚಿವ ಎಸ್‌.ಬಿ. ಬೆಹೆರಾ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT