‘ಪಾಕ್‌ ಜೊತೆಗಿನ ಬಾಂಧವ್ಯ ಸುಧಾರಿಸುವ ನಿರೀಕ್ಷೆ’

7

‘ಪಾಕ್‌ ಜೊತೆಗಿನ ಬಾಂಧವ್ಯ ಸುಧಾರಿಸುವ ನಿರೀಕ್ಷೆ’

Published:
Updated:

ಶ್ರೀನಗರ : ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿ ಆದ ಬಳಿಕ ಆ ದೇಶದ ಜೊತೆಗಿನ ಭಾರತದ ಬಾಂಧವ್ಯ ಉತ್ತಮಗೊಳ್ಳುವ ಭರವಸೆ ಇದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲ ಹೇಳಿದ್ದಾರೆ. 

ನೆರೆಯ ರಾಷ್ಟ್ರದ ಜತೆಗಿನ ಬಾಂಧವ್ಯ ಸುಧಾರಿಸಲು ಬಯಸಿದ್ದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರೂ ಸಾಗುವ ನಿರೀಕ್ಷೆ ಇದೆ ಎಂದಿದ್ದಾರೆ.

‘ಸ್ನೇಹಿತರನ್ನು ಬದಲಾಯಿಸಬಹುದು, ಆದರೆ ನೆರೆಯವರನ್ನಲ್ಲ ಎಂದು ವಾಜಪೇಯಿ ಅವರು ಹೇಳಿದ್ದನ್ನು ನಾವು ಮರೆಯಬಾರದು. ಎರಡೂ ರಾಷ್ಟ್ರಗಳು ಸ್ನೇಹದಿಂದ ಇದ್ದರೆ ಪ್ರಗತಿ ಸಾಧಿಸಬಹುದು’ ಎಂದು ಫಾರೂಕ್‌ ಅಭಿಪ್ರಾಯಪಟ್ಟಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !