ಮಕ್ಕಳ ಕಳ್ಳತನ: ಶೇ 30ರಷ್ಟು ಹೆಚ್ಚಳ

7

ಮಕ್ಕಳ ಕಳ್ಳತನ: ಶೇ 30ರಷ್ಟು ಹೆಚ್ಚಳ

Published:
Updated:

ನವದೆಹಲಿ: ಮಕ್ಕಳ ಅಪಹರಣ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಳವಾಗಿದೆ. 

ಕೇಂದ್ರ ಗೃಹ ಇಲಾಖೆ ನೀಡಿರುವ ವರದಿ ಪ್ರಕಾರ, ದೇಶದಲ್ಲಿ ಮಕ್ಕಳ ಅಪಹರಣ ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಕಳೆದೊಂದು ವರ್ಷದಲ್ಲಿ ಮಕ್ಕಳ ಅಪಹರಣ ಪ್ರಕರಣ ಶೇ 30.6ರಷ್ಟು ಹೆಚ್ಚಾಗಿರುವ ಆಘಾತಕಾರಿ ಸಂಗತಿಯತ್ತ ಈ ವರದಿ ಬೊಟ್ಟು ಮಾಡಿದೆ.

ಕೇಂದ್ರ ಗೃಹ ಸಚಿವಾಲಯ 2017–18ನೇ ಸಾಲಿನ ವರದಿ ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಇದುವರೆಗೆ ಆಗಿರುವ ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಶೇ 40.4ರಷ್ಟು ಪ್ರಕರಣಗಳಲ್ಲಿ ಮಾತ್ರ ಆರೋಪಪಟ್ಟಿ ಸಲ್ಲಿಸಲಾಗಿದೆ. ಶೇ 22.7ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.

2016ರಲ್ಲಿ ಪ್ರತಿ ಒಂದು ಲಕ್ಷ ಮಕ್ಕಳಲ್ಲಿ 24 ಮಕ್ಕಳ ಮೇಲೆ ಅಪರಾಧ ನಡೆದಿದೆ. ಮಾನವ ಕಳ್ಳಸಾಗಣೆ, ಅಪಹರಣ ಮತ್ತು ಒತ್ತೆ, ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆ (ಪೊಕ್ಸೊ) ಮತ್ತು ಬಾಲ ನ್ಯಾಯ ಕಾಯ್ದೆಯಡಿ ಮಕ್ಕಳ ಅಪಹರಣ ಪ್ರಕರಣಗಳು ದಾಖಲಾಗಿವೆ. ಕಳ್ಳಸಾಗಣೆ ಮಾಡಿದ ಮಕ್ಕಳನ್ನು ಬಲವಂತದ ಕೂಲಿ ಕೆಲಸ, ವೇಶ್ಯಾವಾಟಿಕೆ ಹಾಗೂ ಲೈಂಗಿಕ ಶೋಷಣೆಗೆ ಬಳಸಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ.

ದೇಶದ ವಿವಿಧ ಭಾಗಗಳಲ್ಲಿ ಮಕ್ಕಳ ಕಳ್ಳತನ ಬಗ್ಗೆ ವದಂತಿ ಹರಡುತ್ತಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಇದು ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಇದರಿಂದಾಗಿ ಆಕ್ರೋಶಿತ ಜನರು ಅಮಾಯಕರನ್ನು

ಬಡಿದು ಕೊಲ್ಲುತ್ತಿರುವ ಘಟನೆಗಳು ದೇಶವನ್ನು ತಲ್ಲಣಗೊಳಿಸಿವೆ. ಮಕ್ಕಳ ಕಳ್ಳತನ ವದಂತಿಯಿಂದ ಮಹಾರಾಷ್ಟ್ರದ ಧುಳೆ ಜಿಲ್ಲೆಯಲ್ಲಿ ಐವರು ಸೇರಿದಂತೆ ದೇಶದ ವಿವಿಧೆಡೆ ಕಳೆದ ಎರಡು ತಿಂಗಳಲ್ಲಿ 20 ಮಂದಿ ಅಮಾಯಕರ ಹತ್ಯೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !