ಮಹಿಳಾ ಪತ್ರಕರ್ತರೇನು ಮುಗ್ಧರಲ್ಲ: ಲತಾ ಕೇಲ್ಕರ್ 

7
ಎಂ.ಜೆ ಅಕ್ಬರ್ ಅವರನ್ನು ಸಮರ್ಥಿಸಿಕೊಂಡ ಅಧ್ಯಕ್ಷೆ

ಮಹಿಳಾ ಪತ್ರಕರ್ತರೇನು ಮುಗ್ಧರಲ್ಲ: ಲತಾ ಕೇಲ್ಕರ್ 

Published:
Updated:

ಭೋಪಾಲ್: ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ ಅಕ್ಬರ್ ಪ್ರಕರಣದ ಕುರಿತು ಮಾತನಾಡಿರುವ ಮಧ್ಯಪ್ರದೇಶದ ಬಿಜೆಪಿಯ ಮಹಿಳಾ ಘಟಕದ ಅಧ್ಯಕ್ಷೆ ಲತಾ ಕೇಲ್ಕರ್, ದುರುಪಯೋಗಪಡಿಸಿಕೊಳ್ಳಲು, ಮಹಿಳಾ ಪತ್ರಕರ್ತರೇನು ಬಹಳ ಮುಗ್ಧರಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಮೂಲಕ ಸಚಿವರನ್ನು ಸಮರ್ಥಿಸಿಕೊಂಡಿರುವ ಅವರು, ‘ಎಂ.ಜೆ ಅಕ್ಬರ್ ಈ ಹಿಂದೆ ಪತ್ರಕರ್ತರಾಗಿದ್ದವರು. ಸದ್ಯ ಅವರ ಮೇಲೆ ಆರೋಪ ಹೊರಿಸಿದವರೂ ಪತ್ರಕರ್ತರೇ. ಹಾಗಾಗಿ ಇಬ್ಬರಲ್ಲೂ ದೋಷಗಳಿವೆ’ ಎಂದಿದ್ದಾರೆ.

ಲೈಂಗಿಕ ದೌರ್ಜನ್ಯದ ವಿರುದ್ಧ ಮಿ–ಟೂ ಅಭಿಯಾನದ ಮೂಲಕ ಧೈರ್ಯವಾಗಿ ಮಾತನಾಡುತ್ತಿರುವ ಮಹಿಳೆಯರ ಎದೆಗಾರಿಕೆಯನ್ನು ಮೆಚ್ಚಿಕೊಂಡ ಲತಾ ಕೇಲ್ಕರ್ ಅವರು, ‘ಇದು ಕಿರುಕುಳವೆಂಬುದು ಅವರ ತಿಳುವಳಿಕೆಗೆ ಈಗ ಬಂದಿದೆ’ ಎಂದು ಕಾಲೆಳೆದಿದ್ದಾರೆ. ದೌರ್ಜನ್ಯದ ವಿರುದ್ಧ ಆ ಸಮಯದಲ್ಲಿ ಅವರು ವರದಿ ಮಾಡದಿರುವುದು ಕಿರುಕುಳ ಆಗ ನಡೆದಿರುವುದಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ:
ಅಕ್ಬರ್‌ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್‌ ವಕ್ತಾರ ಜೈಪಾಲ್‌ ರೆಡ್ಡಿ ಆಗ್ರಹಿಸಿದ್ದಾರೆ. ಕನಿಷ್ಠ ಐವರು ಮಹಿಳೆಯರು ಅಕ್ಬರ್‌ ವಿರುದ್ಧ ಅಸಭ್ಯ ವರ್ತನೆಯ ಆಪಾದನೆ ಮಾಡಿದ್ದಾರೆ. 

ಇವನ್ನೂ ಓದಿ...
ಮಿ–ಟೂ ಅಟಾಟೋಪ: ಸಚಿವ ಅಕ್ಬರ್‌ ತಲೆದಂಡಕ್ಕೆ ಒತ್ತಡ

ಹೊರಬರುತ್ತಿರುವ ಲೈಂಗಿಕ ದೌರ್ಜನ್ಯ ಆರೋಪಗಳು: ಬಿಟ್ಟೆನೆಂದರೂ ಬಿಡದ ಮಿ–ಟೂ
 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !