‘ಗೋವು ಹತ್ಯೆ ಸಂಪೂರ್ಣ ನಿಷೇಧಕ್ಕೆ ಕಾನೂನು ರೂಪಿಸಿ’

7
ಬಾಬಾ ರಾಮದೇವ್‌ ಆಗ್ರಹ

‘ಗೋವು ಹತ್ಯೆ ಸಂಪೂರ್ಣ ನಿಷೇಧಕ್ಕೆ ಕಾನೂನು ರೂಪಿಸಿ’

Published:
Updated:

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ದೊಡ್ಡ ರಾಷ್ಟ್ರಭಕ್ತ ಹಾಗೂ ಗೋವು ಭಕ್ತ ಯಾರಿದ್ದಾರೆ ಎಂದು ಕೇಳಿರುವ ಯೋಗ ಗುರು ಹಾಗೂ ಉದ್ಯಮಿ ಬಾಬಾ ರಾಮದೇವ್, ದೇಶದಾದ್ಯಂತ ಗೋಹತ್ಯೆಗೆ ಸಂಪೂರ್ಣ ನಿಷೇಧ ಹೇರಲು ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಗೋವು ಕಳ್ಳಸಾಗಾಣಿಕೆಗೆ ಕಡಿವಾಣ ಹಾಕುವಲ್ಲಿ ಪೊಲೀಸರು, ಆಡಳಿತ ವ್ಯವಸ್ಥೆ ವಿಫಲವಾಗುವುದರಿಂದ, ಗೋರಕ್ಷಕರು ಅನಿವಾರ್ಯವಾಗಿ ಬೀದಿಗಿಳಿದು ಪ್ರತಿಭಟಿಸುವಂತಾಗಿದೆ ಎಂದರು. 

ಅಕ್ರಮವಾಗಿ ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕೆಲವು ಗೋವು ರಕ್ಷಕರು ಬೀದಿಗಿಳಿಯುವುದರಿಂದ ನಿಜವಾಗಿಯೂ ಗೋವುಗಳ ಸಂರಕ್ಷಣೆಗೆ ಶ್ರಮಿಸುವ ‘ಶೇ 90ರಷ್ಟು’ ಜನರ ಬಗ್ಗೆಯೂ ಅನುಮಾನ ಮೂಡುವಂತೆ ಆಗುತ್ತದೆ ಎಂದು ಅವರು ಹೇಳಿದ್ದಾರೆ. 

‘ಗೋವು ಕಳ್ಳಸಾಗಾಣಿಕೆದಾರರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅವರಿಗೆ ಪ್ರೋತ್ಸಾಹ ನೀಡಬಾರದು. ಕಸಾಯಿಖಾನೆಗೆ ಪರವಾನಗಿ ಹೊಂದಿರುವವರನ್ನು ನಾವು ಬೆಂಬಲಿಸುವುದಿಲ್ಲ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !