ಐಎಎಸ್‌ ಅಧಿಕಾರಿಗಳಿಗೆ ಸಿನಿಮಾ ರಸಗ್ರಹಣ ತರಬೇತಿ

7

ಐಎಎಸ್‌ ಅಧಿಕಾರಿಗಳಿಗೆ ಸಿನಿಮಾ ರಸಗ್ರಹಣ ತರಬೇತಿ

Published:
Updated:

ಪುಣೆ : ತರಬೇತಿ ನಿರತ 175 ಐಎಎಸ್‌ ಅಧಿಕಾರಿಗಳಿಗೆ ಇದೇ ಮೊದಲ ಬಾರಿಗೆ ಚಲನಚಿತ್ರ ರಸಗ್ರಹಣ ತರಬೇತಿಯನ್ನು ನೀಡಲಾಗಿದೆ.

ಪುಣೆಯ ಫಿಲ್ಮ್‌ ಅಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಫ್‌ಟಿಐಐ)ಸಿದ್ಧಪಡಿಸಿದ ತರಬೇತಿ ಮಸೂರಿಯಲ್ಲಿರುವ ಲಾಲ್‌ಬಹದ್ದೂರ್‌ ಶಾಸ್ತ್ರಿ ನ್ಯಾಷನಲ್‌ ಅಕಾಡೆಮಿ ಆಫ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ಜೂನ್‌ 21ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು.

178 ತರಬೇತಿ ನಿರತ ಐಎಎಸ್‌ ಅಧಿಕಾರಿಗಳು, ಮೂವರು ರಾಯಲ್‌ ಭೂತಾನ್‌ ಸಿವಿಲ್‌ ಸರ್ವೀಸ್‌ ಅಧಿಕಾರಿಗಳು ತರಬೇತಿಗೆ ಹಾಜರಾಗಿದ್ದರು. ಹಿರಿಯ ನಟ ನಾಸಿರುದ್ದೀನ್‌ ಶಾ, ಪತ್ನಿ ಹಾಗೂ ನಟಿ ರತ್ನಾ ಪಾಠಕ್‌ ಶಾ ದಂಪತಿ ಭಾರತೀಯ ಚಲನಚಿತ್ರಗಳ ಕುರಿತ ತಮ್ಮ ಅನಿಸಿಕೆ ಹಂಚಿಕೊಂಡರು ಎಂದು ಎಫ್‌ಟಿಐಐ ಅಧಿಕಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !