ಚಿತ್ರನಿರ್ದೇಶಕ ವಿಜಯ್ ಗುಟ್ಟೆ ಬಂಧನ

7
ಜಿಎಸ್‌ಟಿಯಲ್ಲಿ ₹34 ಕೋಟಿ ವಂಚನೆ

ಚಿತ್ರನಿರ್ದೇಶಕ ವಿಜಯ್ ಗುಟ್ಟೆ ಬಂಧನ

Published:
Updated:
‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಸಿನಿಮಾದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರ ಪಾತ್ರದಲ್ಲಿ ನಟಿಸುತ್ತಿರುವ ಅನುಪಮ್‌ ಖೇರ್‌ ಅವರೊಡನೆ ವಿಜಯ ರತ್ನಾಕರ್‌ ಗುಟ್ಟೆ.  –ಇನ್‌ಸ್ಟಾಗ್ರಾಂ ಚಿತ್ರ

ಮುಂಬೈ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ರೂಪದಲ್ಲಿ ₹34 ಕೋಟಿ ವಂಚಿಸಿದ ಆರೋಪದ ಮೇಲೆ ಚಿತ್ರನಿರ್ದೇಶಕ ವಿಜಯ ರತ್ನಾಕರ್‌ ಗುಟ್ಟೆ ಅವರನ್ನು ಬಂಧಿಸಲಾಗಿದೆ ಎಂದು ಜಿಎಸ್‌ಟಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 

ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯವು (ಡಿಜಿಜಿಎಸ್‌ಟಿಐ) ಗುರುವಾರ ಗುಟ್ಟೆ ಅವರನ್ನು ಬಂಧಿಸಿದ್ದು, ಆಗಸ್ಟ್‌ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಯಾವುದೇ ಸರಕು ಮತ್ತು ಸೇವೆಯನ್ನು ಪಡೆಯದೇ ಹೊರೈಝನ್‌ ಔಟ್‌ಸೋರ್ಸ್‌ ಸಲ್ಯುಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿಯಿಂದ ಬಿಲ್‌ ಪಡೆದಿರುವುದಾಗಿ ಹೇಳಿರುವ ಗುಟ್ಟೆ ಕಂಪನಿ, ಇದಕ್ಕಾಗಿ 149 ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿ, ₹34.37 ಕೋಟಿ ಜಿಎಸ್‌ಟಿ ಕಟ್ಟಲಾಗಿದೆ ಎಂದು ಸುಳ್ಳು ದಾಖಲೆ ತೋರಿಸಿ ವಂಚಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಕಳೆದ ಮೇನಲ್ಲಿ ಡಿಜಿಜಿಎಸ್‌ಟಿಐ ಹೊರೈಝನ್‌ ಔಟ್‌ಸೋರ್ಸ್‌ ಸಲ್ಯುಷನ್ಸ್‌ ನಿರ್ದೇಶಕರನ್ನು ಬಂಧಿಸಿತ್ತು. 

ಗುಟ್ಟೆ ಮೊದಲ ಬಾರಿಗೆ ನಿರ್ದೇಶಿಸಿರುವ ‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಬರುವ ಡಿಸೆಂಬರ್‌ 21ರಂದು ಬಿಡುಗಡೆಯಾಗಲಿದೆ. ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರ ಕುರಿತಾಗಿರುವ ಚಿತ್ರ ಇದಾಗಿದೆ. ಇದೇ ಶೀರ್ಷಿಕೆಯಡಿ ಪುಸ್ತಕವೂ ಪ್ರಕಟವಾಗಿದೆ. ಮನಮೋಹನ್‌ಸಿಂಗ್‌ ಅವರ ಪಾತ್ರದಲ್ಲಿ ಅನುಪಮ್‌ ಖೇರ್‌ ನಟಿಸುತ್ತಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !