ಶನಿವಾರ, ಜನವರಿ 18, 2020
21 °C

ಪೋರ್ಷೆ ಕಾರು ಮಾಲೀಕನಿಗೆ ₹27 ಲಕ್ಷ ದಂಡ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಅಹಮದಾಬಾದ್‌:  ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೋರ್ಷೆ ಕಾರು ಮಾಲೀಕ ರಂಜಿತ್‌ ದೇಸಾಯಿ ಎನ್ನುವವರು ₹27.68 ಲಕ್ಷ ದಂಡ ಪಾವತಿಸಿದ್ದಾರೆ.

ಇದು ದೇಶದಲ್ಲೇ ಅತಿ ಹೆಚ್ಚಿನ ಮೊತ್ತದ ದಂಡವಾಗಿದೆ ಎಂದು ಅಹಮದಾಬಾದ್‌ ಪೊಲೀಸರು ತಿಳಿಸಿದ್ದಾರೆ.

ಒಂದು ತಿಂಗಳ ಹಿಂದೆ ವಾಹನಗಳ ತಪಾಸಣೆ ಕೈಗೊಳ್ಳುತ್ತಿದ್ದಾಗ ₹2.38 ಕೋಟಿ ಮೌಲ್ಯದ ಪೋರ್ಷೆ ಕಾರನ್ನು ತಡೆದರು. ಈ ವಾಹನಕ್ಕೆ ನಂಬರ್‌ ಪ್ಲೇಟ್‌ ಇರಲಿಲ್ಲ ಮತ್ತು ಯಾವುದೇ ದಾಖಲೆಗಳು ಇರಲಿಲ್ಲ. ಆಗ ಪೊಲೀಸರು ಕಾರು ಮಾಲೀಕ ರಂಜಿತ್‌ ದೇಸಾಯಿಗೆ ₹9ಲಕ್ಷ ದಂಡ ವಿಧಿಸಿದ್ದರು. ಕಾರು ಆಮದು ಮಾಡಿಕೊಂಡು ಒಂದು ತಿಂಗಳಾದರೂ ವಾಹನದ ನೋಂದಣಿ ಮಾಡಿಸಿರಲಿಲ್ಲ.

ಕೆಲ ದಿನಗಳ ಬಳಿಕ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದ ರಂಜಿತ್‌ ದೇಸಾಯಿ ತೆರಿಗೆ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪಡೆದಿದ್ದರಿಂದ ₹27.68 ಲಕ್ಷ ಪಾವತಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಳಂಬವಾಗಿ ದಂಡ ಪಾವತಿಸಿದ್ದಕ್ಕೆ ₹12 ಲಕ್ಷ ಹಾಗೂ ಉಳಿದ ಮೊತ್ತವು ರಸ್ತೆ ತೆರಿಗೆ, ವಾಹನ ನೋಂದಣಿ ಶುಲ್ಕ ಸೇರಿದಂತೆ ಇತರ ತೆರಿಗೆಗಳಾಗಿವೆ ಎಂದು ತಿಳಿಸಿದ್ದಾರೆ.

‘ಪೋರ್ಷೆ ಕಾರಿನ ಮಾಲೀಕನಿಗೆ ಆರ್‌ಟಿಒ ಅಧಿಕಾರಿಗಳು ₹27.68 ಲಕ್ಷ ದಂಡ ವಿಧಿಸಿದ್ದಾರೆ. ನಿಯಮಗಳು ಎಲ್ಲರಿಗೂ ಒಂದೇ’ ಎಂದು ಅಹಮದಾಬಾದ್‌ ನಗರ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು