ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಬೆಂಕಿ, ಕಾಲ್ತುಳಿತದಿಂದ 30 ಜನರಿಗೆ ಗಾಯ

ಶನಿವಾರ, ಮಾರ್ಚ್ 23, 2019
24 °C

ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಬೆಂಕಿ, ಕಾಲ್ತುಳಿತದಿಂದ 30 ಜನರಿಗೆ ಗಾಯ

Published:
Updated:

ಕೋಲ್ಕತ್ತಾ: ಇಲ್ಲಿನ ಮುರ್ಶಿದಾಬಾದ್‌ ಜಿಲ್ಲೆಯ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡದಿಂದ ಕಾಲ್ತುಳಿತ ಉಂಟಾಗಿ 30 ಮಂದಿ ಗಾಯಗೊಂಡಿದ್ದಾರೆ.

ಆಸ್ಪತ್ರೆಯ ಐದನೇ ಮಹಡಿಯಲ್ಲಿ ಬೆಂಕಿ ಉಂಟಾಗಿ ದಟ್ಟ ಹೊಗೆ ಆವರಿಸಿದೆ. ಇದರಿಂದ ಗಾಬರಿಗೊಂಡ ಜನರ ನಡುವೆ ನೂಕುನುಗ್ಗಲು ಉಂಟಾಗಿ, ಹೊರ ಓಡುವಾಗ ಕಾಲ್ತುಳಿತಕ್ಕೆ 30 ಮಂದಿ ಗಾಯಗೊಂಡಿದ್ದರೆ. ವ್ಯಕ್ತಿಯೊಬ್ಬ ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಖಚಿತಪಡಿಸಿಲ್ಲ.

‘ಹೊಗೆ ಕಾಣಿಸಿದ ಕೂಡಲೇ ಜನರು ಗಾಬರಿಗೊಂಡು ಓಡಿದರು ಇದರಿಂದ ಕಾಲ್ತುಳಿತ ಉಂಟಾಗಿದೆ. 30 ಜನರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ‘ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಮೂರು ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಿವೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !