ಗುರುವಾರ , ಸೆಪ್ಟೆಂಬರ್ 19, 2019
29 °C

ಬುಡಕಟ್ಟು ಸಮುದಾಯದ ಯುವತಿ ಪೈಲಟ್‌

Published:
Updated:
Prajavani

ಮಾಲ್ಕನ್‌ಗಿರಿ/ಭುವನೇಶ್ವರ: ಒಡಿಶಾದ ನಕ್ಸಲ್‌ಪೀಡಿತ ಮಾಲ್ಕನ್‌ಗಿರಿ ಜಿಲ್ಲೆಯ 27 ವರ್ಷದ ಅನುಪ್ರಿಯಾ ಲಕ್ರಾ ಅವರು ಬುಡಕಟ್ಟು ಸಮುದಾಯದ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪೈಲಟ್‌ ಆಗಬೇಕೆಂದು ಕನಸು ಕಂಡಿದ್ದ ಅನುಪ್ರಿಯಾ ಅವರು, ಎಂಜಿನಿಯರಿಂಗ್‌ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿ, 2012ರಲ್ಲಿ ವಾಯುಯಾನ ಅಕಾಡೆಮಿಗೆ ಸೇರ್ಪಡೆಗೊಂಡಿದ್ದರು. ಇದೀಗ ಅವರ ಕನಸು ನನಸಾಗಿದೆ. ಮಗಳ ಸಾಧನೆ ಮಾಲ್ಕನ್‌ಗಿರಿಯ ಜನರು ಹೆಮ್ಮೆ ಪಡುವಂಥದ್ದು ಎಂದು ಆಕೆಯ ತಾಯಿ ಜಮಾಜ್‌ ಯಶ್ಮಿನ್‌ ಲಕ್ರಾ ಹೇಳಿದ್ದಾರೆ.

Post Comments (+)