ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗದರ್ಶನಕ್ಕೆ ಕುದುರೆ ಮೊರೆಹೋದ ಅಂಧ ವ್ಯಕ್ತಿ

Last Updated 14 ಅಕ್ಟೋಬರ್ 2018, 20:32 IST
ಅಕ್ಷರ ಗಾತ್ರ

ಲಂಡನ್‌: ತನ್ನ ದೈನಂದಿನ ಕಾರ್ಯಚಟುವಟಿಕೆಗಳಿಗೆ ನೆರವಾಗಲು ಭಾರತೀಯ ಸಂಜಾತ ಅಂಧ ವ್ಯಕ್ತಿಯೊಬ್ಬ ವಾಯವ್ಯ ಇಂಗ್ಲೆಂಡ್‌ನಲ್ಲಿ ಗೈಡ್‌ ಹಾರ್ಸ್‌ (ಮಾರ್ಗದರ್ಶಿ ಕುದುರೆ) ಮೊರೆ ಹೋಗಿದ್ದಾರೆ.

ಲ್ಯಾಂಕ್‌ಶೈರನ್‌ ಬ್ಲಾಕ್‌ಬರ್ನ್‌ನಲ್ಲಿ ಬಿಬಿಸಿ ರೆಡಿಯೊನಲ್ಲಿ ಪತ್ರಕರ್ತನಾಗಿರುವ, 24ರ ಹರೆಯದ ಮೊಹಮದ್‌ ಸಲೀಂ ಪಟೇಲ್‌ ತನ್ನ ನಿತ್ಯ ಕೆಲಸಗಳಿಗಾಗಿ ಗೈಡ್‌ ಕುದುರೆ ಸಾಕುತ್ತಿದ್ದಾರೆ. ಇವರು ಸಂಪೂರ್ಣ ಅಂಧತ್ವಕ್ಕೆ ಒಳಗಾಗಿ, ಗೈಡ್‌ ಕುದುರೆಯ ಮೊರೆ ಹೋದ ಬ್ರಿಟನ್‌ನ ಮೊದಲ ವ್ಯಕ್ತಿ ಎನಿಸಿದ್ದಾರೆ. ಸಲೀಂ ಪಟೇಲ್‌ ಅವರ ತಾಯಿ ಗುಜರಾತ್‌ ಮೂಲದವರು.

ಅಂಧತ್ವ ಸಮಸ್ಯೆ ಇರುವವರು ಸಾಮಾನ್ಯವಾಗಿ ಗೈಡ್‌ಗೆ ಸಾಕು ನಾಯಿಗಳ ಮೊರೆ ಹೋಗುವುದು ಸಹಜ. ಆದರೆ, ಬಾಲ್ಯದಲ್ಲಿ ನಾಯಿ ಕಡಿತಕ್ಕೆ ಸಿಲುಕಿದ್ದ ಸಲೀಂ ಪಟೇಲ್‌ಗೆ ನಾಯಿಗಳನ್ನು ಕಂಡರೆ ಭಯ. ಹಾಗಾಗಿ ತನ್ನ ಗೈಡ್‌ಗೆ ಕುದುರೆ ಆಯ್ಕೆ ಮಾಡಿಕೊಂಡಿದ್ದು, ಈಗ ಅದಕ್ಕೆ ಅವರೇ ತರಬೇತಿ ನೀಡುತ್ತಿದ್ದಾರೆ.

‘ಗೈಡ್‌ ಕುದುರೆ ಇನ್ನೂ ಚಿಕ್ಕ ಪ್ರಾಯದ್ದಾಗಿದ್ದು, 2019ರ ಮೇನಲ್ಲಿ ಅದಕ್ಕೆ ಎರಡು ವರ್ಷ ತುಂಬಲಿದೆ. ಇನ್ನೂ ಎರಡು ವರ್ಷ ಅದಕ್ಕೆ ತರಬೇತಿ ನೀಡುವ ಅಗತ್ಯವಿದೆ. ತರಬೇತಿ ಮುಗಿದ ಮೇಲೆ ಅದು ಖಂಡಿತ ನನ್ನನ್ನು ಮನೆಯಿಂದ ಬ್ಲಾಕ್‌ಬರ್ನ್‌ ನಗರಕ್ಕೆ ಕರೆದುಕೊಂಡು ಹೋಗಿ ಬರುವ ವಿಶ್ವಾಸವಿದೆ’ ಎನ್ನುತ್ತಾರೆ ಪಟೇಲ್‌.

‘ತರಬೇತಿ ಪಡೆದ ಮಾರ್ಗದರ್ಶಿ ನಾಯಿ ಸಾಮಾನ್ಯವಾಗಿ ಎಂಟು ವರ್ಷಗಳಷ್ಟೇ ಸೇವೆ ಒದಗಿಸಬಲ್ಲವು. ಆದರೆ, ಗೈಡ್‌ ಕುದುರೆಯ ಸೇವೆ ಸುಮಾರು 40 ವರ್ಷಗಳವರೆಗೆ ಲಭಿಸಲಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT