ಏರ್ ಇಂಡಿಯಾ ನೌಕರರ ಮುಷ್ಕರ: ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲ ವ್ಯತ್ಯಯ

7

ಏರ್ ಇಂಡಿಯಾ ನೌಕರರ ಮುಷ್ಕರ: ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲ ವ್ಯತ್ಯಯ

Published:
Updated:

ಮುಂಬೈ: ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಗುತ್ತಿಗೆ ನೌಕರರು ದಿಢೀರ್ ಮುಷ್ಕರ ಆರಂಭಿಸಿದ್ದರಿಂದ ಮುಂಬೈನಲ್ಲಿ ಏರ್‌ ಇಂಡಿಯಾ ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲ ವ್ಯತ್ಯಯವಾಗಿತ್ತು.

ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್‌–1 ಮತ್ತು ಟರ್ಮಿನಲ್‌–2ರಲ್ಲಿ ಕೆಲಸ ಮಾಡುವ ಏರ್ ಇಂಡಿಯಾ ಸಂಸ್ಥೆಯ ಗುತ್ತಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಆರಂಭಿಸಿದ್ದರು. ಇದರಿಂದ ಮುಂಬೈನಿಂದ ಹೊರಡುವ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿತ್ತು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ನೌಕರರ ಜತೆ ಮಾತುಕತೆ ನಡೆಸಲಾಗುತ್ತಿದ್ದು ಶೀಘ್ರದಲ್ಲೆ ವಿಮಾನಗಳು ಟೇಕ್‌ ಆಪ್‌ ಆಗಲಿವೆ ಎಂದು ಸಂಸ್ಥೆಯ ವಕ್ತಾರರು ಬೆಳಗ್ಗೆ 9 ಗಂಟೆಗೆ ತಿಳಿಸಿದ್ದರು.

ವಿಮಾನ ಹಾರಾಟ ಸೇವೆ ಆರಂಭವಾಗಿರುವುದಾಗಿ ಏರ್ ಇಂಡಿಯಾ ಸಂಸ್ಥೆಯ ಖಾಯಂ ನೌಕರರು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲ ವ್ಯತ್ಯಯವಾಗಿತ್ತು ಎಮದು ನೌಕರರು ಮಾಹಿತಿ ನೀಡಿದ್ದಾರೆ.  

ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !