ಪ್ರವಾಹ: ಓಣಂ ಆಚರಿಸದಿರಲು ಮಧ್ಯಪ್ರದೇಶದಲ್ಲಿನ ಕೇರಳಿಗರ ನಿರ್ಧಾರ

7

ಪ್ರವಾಹ: ಓಣಂ ಆಚರಿಸದಿರಲು ಮಧ್ಯಪ್ರದೇಶದಲ್ಲಿನ ಕೇರಳಿಗರ ನಿರ್ಧಾರ

Published:
Updated:

ಇಂದೋರ್‌: ಕೇರಳ ಪ್ರವಾಹದ ಮಡುವಿನಲ್ಲಿ ಸಿಲುಕಿರುವ ಜನರ ಸಂಕಷ್ಟಕ್ಕೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನೆಲೆಸಿರುವ ಕೇರಳದ ಜನರು ಮರುಗುತ್ತಿದ್ದಾರೆ. 

ಇದೇ ಆಗಸ್ಟ್‌ 25ರಂದು ಇರುವ ಓಣಂ ಹಬ್ಬವನ್ನು ಆಚರಿಸದೆ, ಆ ಹಬ್ಬಕ್ಕೆ ಖರ್ಚು ಮಾಡಬೇಕು ಅಂದುಕೊಂಡ ಮೊತ್ತದಿಂದ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದಾರೆ. ‘ಹಬ್ಬದ ದಿನ ಸಾಮೂದಾಯಿಕ ಸಂತಸಕೂಟಗಳನ್ನು ಆಯೋಜಿಸದಿರಲು ನಿರ್ಧರಿಸಿದ್ದೇವೆ’ ಎಂದು ‘ಇಂದೋರ್‌ ಕೇರಳಿಯ ಸಮಾಜ’(ಐಕೆಎಸ್‌) ಅಧ್ಯಕ್ಷ ಜೋಸೆಫ್‌ ಥಾಮಸ್‌ ತಿಳಿಸಿರುವುದಾಗಿ ‘ಫ್ರೀಪ್ರೆಸ್‌ ಜರ್ನಲ್‌’ ವರದಿ ಮಾಡಿದೆ. 

‘ಸಂತಸಕೂಟಗಳ ಆಯೋಜನಾ ಮೊತ್ತದಿಂದ ಸಂತ್ರಸ್ತರಿಗೆ ಅಗತ್ಯವಾಗಿರುವ ಪರಿಕರಗಳನ್ನು ಖರಿದೀಸುತ್ತೇವೆ. ಅವುಗಳನ್ನು ಕೇರಳಕ್ಕೆ ಸಾಗಿಸಲು ಇಂಡಿಗೊ ಏರ್‌ಲೈನ್‌ ಕಂಪನಿ ಮುಂದೆ ಬಂದಿದೆ’ ಎಂದು ಥಾಮಸ್‌ ತಿಳಿಸಿದ್ದಾರೆ. 

ನಗರದ ಇಂದೋರ್‌ ನಾಯರ್‌ ಸರ್ವಿಸ್‌ ಸೊಸೈಟಿ, ಶ್ಯಾಮ್‌ ನಗರ ಮಲೆಯಾಳಿ ಅಸೋಸಿಯೇಷನ್‌, ಶ್ರೀ ನಾರಾಯಣ ಧರ್ಮ ಪ್ರಸ್ತಾನಂ, ಅಯ್ಯಪ್ಪ ಆ್ಯಂಡ್‌ ಯುನೈಟೆಡ್‌ ಮಲೆಯಾಳಿ ಅಸೋಸಿಯೇಷನ್‌ಗಳು ಸಹ ಸಂತ್ರಸ್ತರಿಗೆ ನೆರವಾಗಲು ದೇಣಿಗೆ ಸಂಗ್ರಹಿಸುತ್ತಿವೆ. ಸಂಗ್ರಹ ಮೊತ್ತವನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಮೆ ಮಾಡಲು ನಿರ್ಧರಿಸಿವೆ. 

ನೆರವಿಗೆ ಕೈಜೋಡಿಸ ಬಯಸುವವರು ಫೆಡರಲ್‌ ಬ್ಯಾಂಕ್‌ನ ಈ ಕೆಳಗಿನ ಖಾತೆಗೆ ಮೊತ್ತವನ್ನು ಜಮೆ ಮಾಡಬಹುದು ಎಂದು ಐಕೆಎಸ್‌ ಪ್ರಕರಣೆಯಲ್ಲಿ ತಿಳಿಸಿದೆ. 

 * ಬ್ಯಾಂಕ್‌ ಖಾತೆ ಸಂಖ್ಯೆ: 12340100026679
 IFSC Code FDRL0001234

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !