ಬುಧವಾರ, ನವೆಂಬರ್ 13, 2019
22 °C

ರಾಜಸ್ಥಾನದಲ್ಲಿ ಭಾರಿ ಮಳೆ: 400 ಮಂದಿ ರಕ್ಷಣೆ

Published:
Updated:

ಜೈಪುರ: ರಾಜಸ್ಥಾನದ ಚಿತ್ತೋರ್‌ಗಡ ಜಿಲ್ಲೆಯಲ್ಲಿ ಭಾರಿ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿಕೊಂಡಿದ್ದ 350 ವಿದ್ಯಾರ್ಥಿಗಳು ಹಾಗೂ 50 ಶಿಕ್ಷಕರನ್ನು ರಕ್ಷಿಸಲಾಗಿದೆ. 

ರಾಣಾ ಪ್ರತಾಪ್ ಜಲಾಶಯದಿಂದ ನೀರು ಹೊರಬಿಟ್ಟ ಕಾರಣ ರಸ್ತೆ ಸಂಪರ್ಕ ಕಡಿತಗೊಂಡು, ವಿದ್ಯಾರ್ಥಿಗಳು ಶಾಲೆಯಲ್ಲೇ ಉಳಿಯಬೇಕಾಯಿತು. ಸಂತ್ರಸ್ತರ ಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಸ್ಥಳೀಯರು ಆಹಾರ ನೀಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಶಾಲಾ ಆವರಣದಿಂದ ಸ್ಥಳಾಂತರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡ (ಎನ್‌ಡಿಆರ್‌ಎಫ್) ನೆರವಾಯಿತು. ಪ್ರತಾಪಗಡ ಜಿಲ್ಲೆಯಲ್ಲೂ ಪ್ರವಾಹ ರೀತಿ ಸ್ಥಿತಿ ಕಂಡುಬಂದಿದೆ. ಸಂಕಷ್ಟಕ್ಕೆ ಸಿಲುಕಿದ್ದ ಸ್ಥಳೀಯರನ್ನು ಎನ್‌ಡಿಆರ್‌ಎಫ್ ರಕ್ಷಿಸಿತು. ನಿರಂತರ ಮಳೆಯಿಂದ ಜಾಖಮ್, ಮಾಹಿ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದೇ ಪ್ರವಾಹಕ್ಕೆ ಕಾರಣ. 

 

ಪ್ರತಿಕ್ರಿಯಿಸಿ (+)