ಮುಂಬೈ: ಮೇಲ್ಸೇತುವೆ ಕುಸಿದು 5 ಜನರ ಸಾವು

ಸೋಮವಾರ, ಮಾರ್ಚ್ 18, 2019
31 °C

ಮುಂಬೈ: ಮೇಲ್ಸೇತುವೆ ಕುಸಿದು 5 ಜನರ ಸಾವು

Published:
Updated:

ಮುಂಬೈ: ನಗರದ ಛತ್ರಪತಿ ಶಿವಾಜಿ ಟರ್ಮಿನಲ್ಸ್‌ ಬಳಿ ಮೇಲ್ಸೇತುವೆ ಕುಸಿದು ಐದು ಮಂದಿ ಸಾವಿಗೀಡಾಗಿದ್ದಾರೆ.

ಗುರುವಾರ ಸಂಜೆ, 7.30ರ ಹೊತ್ತಿಗೆ ಇದ್ದಕ್ಕಿದ್ದಂತೆ ಮೇಲ್ಸೇತುವೆ ಕುಸಿಯಿತು. ಸಂಜೆ ಜನಸಾಂದ್ರತೆ ಹೆಚ್ಚಾಗಿರುವ ಹೊತ್ತಿನಲ್ಲಿಯೇ ಕುಸಿದಿದ್ದರಿಂದ 36 ಜನರು ಗಾಯಗೊಂಡಿದ್ದಾರೆ.

ಮೃತರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಅವರಿಬ್ಬರೂ ಜಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

1984ರಲ್ಲಿ ನಿರ್ಮಿಸಲಾಗಿದ್ದ ಈ ಮೇಲ್ಸೇತುವೆ ಛತ್ರಪತಿ ಶಿವಾಜಿ ಟರ್ಮಿನಲ್ಸ್‌ನ ಉತ್ತರ ಭಾಗದ ಮೊದಲ ಪ್ಲ್ಯಾಟ್‌ಫಾರ್ಮ್‌ ಹಾಗೂ ಬಿಟಿ ಲೇನ್‌ಗೆ ಸಂಪರ್ಕ ಕಲ್ಪಿಸುತ್ತಿತ್ತು.  


ಕುಸಿದಿರುವ ಪಾದಾಚಾರಿ ಮೇಲ್ಸೇತುವೆ

ಹಲವು ಮಂದಿ ಅವಶೇಷಗಳಲ್ಲಿ ಸಿಲುಕಿಕೊಂಡಿರಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !