ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತದ ಮದುವೆ: ಮೊದಲ ಪತಿ ಜತೆಗೆ ವಾಸಿಸಲು ಸಮ್ಮತಿ

ರಕ್ಷಣೆ ನೀಡುವಂತೆ ಪೊಲೀಸರಿಗೆ ದೆಹಲಿ ಹೈಕೋರ್ಟ್‌ ಸೂಚನೆ
Last Updated 25 ಜುಲೈ 2019, 19:51 IST
ಅಕ್ಷರ ಗಾತ್ರ

ನವದೆಹಲಿ : ಪೋಷಕರು ಬಲವಂತವಾಗಿ ಎರಡನೇ ಮದುವೆ ಮಾಡಿದ್ದ ಮಹಿಳೆಗೆ, ತಾನು ಪ್ರೀತಿಸಿ ಮದುವೆಯಾಗಿದ್ದ ಪತಿಯ ಜೊತೆಗೆ ಇರಲು ದೆಹಲಿ ಹೈಕೋರ್ಟ್‌ ಅನುಮೋದನೆ ನೀಡಿದೆ.

ದಂಪತಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂದು ಸರಿತಾ ವಿಹಾರ ಪೊಲೀಸ್‌ ಠಾಣೆಯ ಅಧಿಕಾರಿಗೂ ಸೂಚಿಸಿದೆ. ಮಹಿಳೆ ಅನ್ಯ ಧರ್ಮದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು, ಆತ ಮತಾಂತರಗೊಂಡ ಬಳಿಕ ಮದುವೆಯಾಗಿದ್ದರು. ಇದನ್ನು ಒಪ್ಪದ ಪೋಷಕರು ಬಲವಂತವಾಗಿ ಮಹಿಳೆಗೆ ಮತ್ತೊಬ್ಬನ ಜೊತೆಗೆ ಮದುವೆ ಮಾಡಿಸಿದ್ದರು.

ಪತ್ನಿಯನ್ನು ಹಾಜರುಪಡಿಸಲು ಸೂಚಿಸಲು ಕೋರಿ ಮೊದಲ ಪತಿ ಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ಗೆ ಹಾಜರಾದ ಮಹಿಳೆ ತಾನು ಮೊದಲ ಪತಿ ಜೊತೆಗೆ ಇರಲು ಬಯಸುವುದಾಗಿ ಹೇಳಿದ್ದರು. ಕೋರ್ಟ್‌ ಇದಕ್ಕೆ ಒಪ್ಪಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT