ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ಆಡಳಿತದ ಅವಧಿಯಲ್ಲಿ 1.20 ಲಕ್ಷ ಹೆಕ್ಟೇರ್‌ ಅರಣ್ಯ ನಾಶ

‘ಯುನಿವರ್ಸಿಟಿ ಆಫ್‌ ಮೇರಿಲ್ಯಾಂಡ್‌’ ಅಧ್ಯಯನ
Last Updated 28 ಏಪ್ರಿಲ್ 2019, 19:58 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಐದು ವರ್ಷಗಳ ಎನ್‌ಡಿಎ ಆಡಳಿತದ ಅವಧಿಯಲ್ಲಿ ದೇಶದಲ್ಲಿ 1.20 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿದೆ.

ಇದು 2009 ಮತ್ತು 2013ರ ನಡುವಣ ಅವಧಿಗಿಂತ ಶೇಕಡ 36ರಷ್ಟು ಹೆಚ್ಚು. 2014 ಮತ್ತು 2018ರಲ್ಲಿ 1,22,748 ಹೆಕ್ಟೇರ್‌ ಪ್ರದೇಶ ಅರಣ್ಯ ನಾಶವಾಗಿದೆ. 2016ರಲ್ಲಿ ಅತಿ ಹೆಚ್ಚಿನ 30,936 ಹೆಕ್ಟೇರ್ ನಷ್ಟವಾಗಿದ್ದರೆ, 2017ರಲ್ಲಿ 29,563 ಹೆಕ್ಟೇರ್‌ಗೆ ಹಾನಿಯಾಗಿದೆ.

‘ಯುನಿವರ್ಸಿಟಿ ಆಫ್‌ ಮೇರಿಲ್ಯಾಂಡ್‌’ ನಡೆಸಿದ ಅಧ್ಯಯನದಿಂದ ಈ ಮಾಹಿತಿ ಪಡೆಯಲಾಗಿದೆ. ಜಗತ್ತಿನಲ್ಲಿನ ಅರಣ್ಯ ನಾಶದ ಬಗ್ಗೆ ನಾಸಾ ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ಈ ಮಾಹಿತಿ ಸಂಗ್ರಹಿಸಲಾಗಿದೆ. ಅಮೆರಿಕದ ಸರ್ಕಾರೇತರ ಸಂಸ್ಥೆ ವಿಶ್ವ ಸಂಪನ್ಮೂಲ ಸಂಸ್ಥೆಯ ಘಟಕವಾದ ‘ಗ್ಲೋಬಲ್‌ ಫಾರೆಸ್ಟ್‌ ವಾಚ್‌’ ಅರಣ್ಯ ನಾಶದ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಆದರೆ, ಉಪಗ್ರಹ ಚಿತ್ರ ಆಧಾರಿತ ಈ ಸಮೀಕ್ಷೆಯು ಅಪಾರ ಪ್ರಮಾಣದ ಅರಣ್ಯ ನಾಶಕ್ಕೆ ಖಚಿತ ಕಾರಣಗಳನ್ನು ನೀಡಿಲ್ಲ.

ಯುಪಿಎ–2 ಅವಧಿಯ 2009 ಮತ್ತು 2013ರ ಅವಧಿಯಲ್ಲಿ 77,963 ಹೆಕ್ಟೇರ್‌ ನಷ್ಟವಾಗಿದ್ದರೆ, 2004 ಮತ್ತು 2008ರ ಯುಪಿಎ–1ರ ಅವಧಿಯಲ್ಲಿ 87,350 ಹೆಕ್ಟೇರ್‌ ಪ್ರದೇಶವನ್ನು ಕಳೆದು
ಕೊಳ್ಳಲಾಗಿದೆ.

ಯುಪಿಎ ಆಡಳಿತಾವಧಿಯಲ್ಲಿ ಗರಿಷ್ಠ ನಷ್ಟವು 2008ರಲ್ಲಿ ಸಂಭವಿಸಿದೆ. ಈ ಅವಧಿಯಲ್ಲಿ 20,702 ಹೆಕ್ಟೇರ್‌ ಪ್ರದೇಶ ಕಡಿಮೆಯಾಯಿತು. 2004ರಲ್ಲಿಯೂ 19,166 ಹೆಕ್ಟೇರ್ ಮತ್ತು 2012ರಲ್ಲಿ 18,804 ಹೆಕ್ಟೇರ್‌ ಪ್ರದೇಶ ಹಾನಿಯಾಯಿತು.

ಈಗಿರುವ ಮಾಹಿತಿಯಂತೆ, ಗಣಿಗಾರಿಕೆ, ಸಾಗುವಳಿ ಹಾಗೂ ವಾಣಿಜ್ಯ ಚಟುವಟಿಕೆಗೆ ಮರಗಳನ್ನು ಕತ್ತರಿಸಿರುವುದು ಅರಣ್ಯ ನಾಶಕ್ಕೆ ಪ್ರಮುಖ ಕಾರಣಗಳಾಗಿವೆ.

ಅರಣ್ಯ ನಾಶದಿಂದ ಭಾರತದಲ್ಲಿ 2017ರ ವೇಳೆಗೆ ಇಂಗಾಲದ ಡೈಆಕ್ಸೈಡ್ ಪ್ರಮಾಣ ಶೇಕಡ 101ರಿಂದ ಶೇಕಡ 250ಕ್ಕೆ ಹೆಚ್ಚಿದೆ ಎಂದು ವಿಶ್ಲೇಷಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT