ವಿದೇಶಿ ವಿನಿಮಯ ಸಂಗ್ರಹದಲ್ಲಿ ಕೊರತೆ

7

ವಿದೇಶಿ ವಿನಿಮಯ ಸಂಗ್ರಹದಲ್ಲಿ ಕೊರತೆ

Published:
Updated:
Prajavani

ನವದೆಹಲಿ: ಅನಿರೀಕ್ಷಿತವಾಗಿ ಆಘಾತಕಾರಿಯಾದ ಬಾಹ್ಯ ವಿದ್ಯಮಾನ ಸಂಭವಿಸಿದರೆ, ದೇಶದಲ್ಲಿ ಸದ್ಯಕ್ಕೆ ಇರುವ ವಿದೇಶಿ ವಿನಿಮಯ ಸಂಗ್ರಹವು ಒಂಬತ್ತು ತಿಂಗಳವರೆಗಿನ ಆಮದಿಗೆ ಸಾಲುವಷ್ಟು ಮಾತ್ರ ಇದೆ.

ಡಾಲರ್‌ ಎದುರು ರೂಪಾಯಿ ವಿನಿಮಯ ದರ ನಿರಂತರವಾಗಿ ಕುಸಿತದ ಹಾದಿಯಲ್ಲಿ ಇರುವುದರಿಂದ ಆಮದಿಗೆ ಪಾವತಿಸುವ ವಿದೇಶಿ ವಿನಿಮಯದ ಸಂಗ್ರಹ ಕಡಿಮೆಯಾಗುತ್ತಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂಕಿ ಅಂಶಗಳು ಈ ಸಂಗತಿಯನ್ನು ದೃಢಪಡಿಸಿವೆ.

ಸದ್ಯಕ್ಕೆ ದೇಶದ ವಿದೇಶಿ ವಿನಿಮಯ ಮೀಸಲು ₹ 27.79 ಲಕ್ಷ ಕೋಟಿಗಳಷ್ಟಿದೆ. 2018ರ ಏಪ್ರಿಲ್‌ನಲ್ಲಿ ಇದು ₹ 29.82 ಲಕ್ಷ ಕೋಟಿಗಳಷ್ಟಿತ್ತು.

2017ರ ಮಾರ್ಚ್‌ ತಿಂಗಳಲ್ಲಿ 11 ತಿಂಗಳಿಗೆ ಸಾಕಾಗುವಷ್ಟಿತ್ತು. 2018ರ ಸೆಪ್ಟೆಂಬರ್‌ ವೇಳೆಗೆ 9 ತಿಂಗಳಿಗೆ ಆಗುವಷ್ಟು ಇದೆ. ಆರ್‌ಬಿಐ ಪ್ರತಿ ವರ್ಷ ಎರಡು ಬಾರಿ ಈ ಅಂಕಿ ಅಂಶ ಬಿಡುಗಡೆ ಮಾಡುತ್ತದೆ.

2013ರ ಮಾರ್ಚ್‌ ತಿಂಗಳಲ್ಲಿ, ರೂಪಾಯಿ ಬೆಲೆ ಕುಸಿತ ತಡೆಗಟ್ಟಲು ಆರ್‌ಬಿಐ ಡಾಲರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿದ್ದರಿಂದ ಇದು 7 ತಿಂಗಳಿಗೆ ಇಳಿದಿತ್ತು.

ಹೆಚ್ಚಿನ ಪ್ರಮಾಣದ ಮೀಸಲು ಅಗತ್ಯ

ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳು ಆಮದು ಮಾಡಿಕೊಂಡ ಸರಕುಗಳಿಗೆ ಡಾಲರ್‌ ರೂಪದಲ್ಲಿ ಹಣ ಪಾವತಿಸುತ್ತವೆ. ಅಲ್ಪಾವಧಿ ಸಾಲ ಮರುಪಾವತಿಗೂ ಡಾಲರ್ ಬಳಸಲಾಗುತ್ತದೆ.

ಈ ಕಾರಣಕ್ಕೆ ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಮೀಸಲು ಇರುವುದು ಅಗತ್ಯವಾಗಿರುತ್ತದೆ.

ವಿದೇಶಿ ವಿನಿಮಯ ಮೀಸಲು ಪ್ರಮಾಣವು ದೇಶವೊಂದು ಬಾಹ್ಯ ಆಘಾತಗಳನ್ನು ಎದುರಿಸುವ ಸಾಮರ್ಥ್ಯದ ಪ್ರತೀಕವೂ ಆಗಿರುತ್ತದೆ. ಆಮದು ಪ್ರಮಾಣವು ಹೆಚ್ಚಿದಷ್ಟೂ ಮೀಸಲು ತ್ವರಿತವಾಗಿ ಕರಗುತ್ತದೆ.

* ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಏರಿಳಿತದ ಕಾರಣಕ್ಕೆ ಬಾಹ್ಯ ವಿದ್ಯಮಾನಗಳ ಮೇಲೆ ತೀವ್ರ ನಿಗಾ ಇರಿಸುವ ಅಗತ್ಯ ಇದೆ

-ಶಕ್ತಿಕಾಂತ್ ದಾಸ್‌, ಆರ್‌ಬಿಐ ಗವರ್ನರ್‌

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !