ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊಕಾನ್ ಸಾಲ ಹಗರಣ: ಚಂದಾ ಕೊಚ್ಚರ್ ಸೇರಿ ಮೂವರ ವಿರುದ್ಧ ಎಫ್‌ಐಆರ್

Last Updated 24 ಜನವರಿ 2019, 11:26 IST
ಅಕ್ಷರ ಗಾತ್ರ

ಮುಂಬೈ: 2012ರ ವಿಡಿಯೊಕಾನ್ ಸಾಲ ಹಗರಣ ಸಂಬಂಧ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ಪತಿ ದೀಪಕ್ ಸೇರಿದಂತೆ ಮೂವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

₹3,250 ಕೋಟಿ ಹಣವನ್ನು ವಿಡಿಯೊಕಾನ್ ಗ್ರೂಪ್‌ಗೆ ಸಾಲ ನೀಡಿರುವ ಬಗ್ಗೆ ಸಿಬಿಐ ತನಿಖೆ ಕೈಗೊಂಡಿದ್ದು, ವಿಡಿಯೊಕಾನ್ ನಿರ್ವಹಣಾ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಎಫ್‌ಐಆರ್‌ನಲ್ಲಿಯೂ ಅವರ ಹೆಸರನ್ನೂ ದಾಖಲಿಸಲಾಗಿದೆ

ಮುಂಬೈನ ನುಪವರ್ ಕಂಪೆನಿ, ವಿಡಿಯೊಕಾನ್ ಸಂಸ್ಥೆ, ಸುಪ್ರೀಂ ಎನರ್ಜಿ ಸೇರಿದಂತೆ ಒಟ್ಟು ನಾಲ್ಕು ಕಂಪೆನಿಗಳ ಮೇಲೆ ದಾಳಿ ನಡೆಸಿದ ಸಿಬಿಐ ಶೋಧಕಾರ್ಯ ಕೈಗೊಂಡಿದೆ.

ಏನಿದು ಹಗರಣ?
ವಿಡಿಯೊಕಾನ್ ಸಂಸ್ಥೆಯು 2012ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ₹3,250 ಕೋಟಿ ಹಣವನ್ನು ಸಾಲ ಪಡೆದಿತ್ತು. ಕೆಲವು ತಿಂಗಳುಗಳ ನಂತರ ದೀಪಕ್ ಕೊಚ್ಚರ್ ಹಾಗೂ ಚಂದಾ ಕೊಚ್ಚರ್ ನೇತೃತ್ವದ ನುಪವರ್ ಕಂಪೆನಿಯಲ್ಲಿ ಹೂಡಿಕೆ ಮಾಡಿತ್ತು. ಇದಾದ ಹತ್ತು ತಿಂಗಳ ನಂತರಅಂದರೆ ಕಳೆದ ಮಾರ್ಚ್‌ನಲ್ಲಿ ಸಿಬಿಐ ಪ್ರಾಥಮಿಕ ತನಿಖೆ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT