ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ನುಂಗಿದ ಹೆಬ್ಬಾವು

Last Updated 16 ಜೂನ್ 2018, 19:31 IST
ಅಕ್ಷರ ಗಾತ್ರ

ಮಕಸ್ಸಾರ್‌ (ಇಂಡೊನೇಷ್ಯಾ): ಇಲ್ಲಿನ ಮುನಾ ದ್ವೀಪದ ಪರ್ಸಿಯಾಪನ್‌ ಲಾವೆಲಾ ಗ್ರಾಮದಲ್ಲಿ ಹೆಬ್ಬಾವೊಂದು 54 ವರ್ಷದ ಮಹಿಳೆಯನ್ನು ನುಂಗಿದ್ದು, ಉಬ್ಬಿದ್ದ ಅದರ ಹೊಟ್ಟೆಯನ್ನು ಬಗೆದಾಗ ಮಹಿಳೆಯ ಶವ ಸಿಕ್ಕಿದೆ.

ಗುರುವಾರ ಕೈತೋಟಕ್ಕೆ ತೆರಳಿದ್ದ ವಾ ತಿಬಾ ಅವರು ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಸಂಬಂಧಿಕರು ಗ್ರಾಮದಲ್ಲಿ ಹುಡುಕಾಡಿದ್ದಾರೆ. ನಂತರ, ತಿಬಾ ಅವರ ಚಪ್ಪಲಿ ಬಿದ್ದಿದ್ದ 30 ಮೀಟರ್‌ ದೂರದಲ್ಲಿ 23 ಅಡಿ ಉದ್ದದ ಹೆಬ್ಬಾವು ಕಾಣಿಸಿದೆ.

ಅದರ ಹೊಟ್ಟೆ ಉಬ್ಬಿರುವುದನ್ನು ಗಮನಿಸಿದ ಗ್ರಾಮಸ್ಥರು, ಮಹಿಳೆಯನ್ನು ನುಂಗಿದೆ ಎಂದು ತಿಳಿದು ಅದನ್ನು  ಹೊಡೆದು ಕೊಂದು, ಶವವನ್ನು ಹೊರತೆಗೆದಿದ್ದಾರೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿ ಹಮ್ಕಾ ತಿಳಿಸಿದ್ದಾರೆ.

ಇಂಡೊನೇಷ್ಯಾ ಮತ್ತು ಫಿಲಿಪ್ಪೀನ್ಸ್‌ನಲ್ಲಿ ಸಾಮಾನ್ಯವಾಗಿ 6 ಮೀಟರ್‌ ಉದ್ದದ ಹೆಬ್ಬಾವುಗಳು ಕಂಡು ಬರುತ್ತವೆ. ಪ್ರಾಣಿಗಳನ್ನು ನುಂಗುವ ಇವು, ಮನುಷ್ಯರನ್ನು ಭಕ್ಷಿಸುವುದು ವಿರಳ. ಕಳೆದ ವರ್ಷದ ಮಾರ್ಚ್‌ನಲ್ಲಿ, ರೈತರೊಬ್ಬರನ್ನು ಹೆಬ್ಬಾವು ಬಲಿ ತೆಗೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT