ಶನಿವಾರ, ಆಗಸ್ಟ್ 24, 2019
23 °C

ದುಷ್ಕರ್ಮಿಗಳಿಂದ ತಿರುನಲ್ವೇಲಿ ಮಾಜಿ ಮೇಯರ್ ಕುಟುಂಬದ ಹತ್ಯೆ 

Published:
Updated:

ತಿರುನಲ್ವೇಲಿ: ತಿರುನಲ್ವೇಲಿ ಮಾಜಿ ಮೇಯರ್, ಡಿಎಂಕೆ ನಾಯಕಿ ಉಮಾ ಮಹೇಶ್ವರಿ, ಅವರ ಪತಿ ಮತ್ತು ಮನೆಯ ಕೆಲಸದಾಕೆ ಮಂಗಳವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ. ತಮಿಳುನಾಡಿದ ತಿರುನಲ್ವೇಲಿ ಜಿಲ್ಲೆಯ ರೆಡ್ಡಿಯಾರ್‌ಪಟ್ಟಿ ನಗರದ ಬಳಿಯಿರುವ ಉಮಾ ಅವರ ನಿವಾಸದಲ್ಲಿ ಈ ಕೃತ್ಯ ನಡೆದಿದೆ.

ಮಂಗಳವಾರ ಸಂಜೆ ಈ  ಕೃತ್ಯ ನಡೆದಿದ್ದು ತಿರುನಲ್ವೇಲಿ ಜಿಲ್ಲಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹತ್ಯೆ ರಾಜಕೀಯ ಪ್ರೇರಿತ ಆಗಿರಲಿಕ್ಕಿಲ್ಲ ಎಂದು ಪ್ರಾಥಮಿಕ ವರದಿಗಳಲ್ಲಿ ಹೇಳಲಾಗಿದೆ.
 

Post Comments (+)