7

ಮುಜಾಫರ್ ನಗರದ ಅಂಗಡಿಯೊಂದರಲ್ಲಿ ಸ್ಫೋಟ: ನಾಲ್ವರು ಸಾವು

Published:
Updated:

ಮುಜಾಫರ್ ನಗರ (ಉತ್ತರ ಪ್ರದೇಶ): ಇಲ್ಲಿನ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಗುಜರಿ ಅಂಗಡಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು ನಾಲ್ಕು ಮಂದಿ ಸಾವಿಗೀಡಾದ ಘಟನೆ ವರದಿಯಾಗಿದೆ.

ಸೋಮವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಸ್ಫೋಟಕ್ಕೆ ಕಾರಣ ಏನೆಂದು ಪತ್ತೆಯಾಗಿಲ್ಲ. ಈ ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ಎಎನ್‌ಐ ಸುದ್ಗಿ ಸಂಸ್ಥೆ ವರದಿ ಮಾಡಿದೆ.

ಸೋಮವಾರ ಮಧ್ಯಾಹ್ನ ಸಾರ್ವತ್ ರೋಡ್‍ನಲ್ಲಿರುವ ಅಂಗಡಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವಿಗೀಡಾದ ಇಬ್ಬರನ್ನು ತಜೀಮ್  (50) ಮತ್ತು ಶಜಾದ್ (55) ಎಂದು ಗುರುತಿಸಲಾಗಿದೆ. ಇವರಿಬ್ಬರು ಗುಜರಿ ಅಂಗಡಿಯವರಾಗಿದ್ದಾರೆ.
ಅಂಗಡಿಯ ಮುಂದೆ ಹಾದು ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳು ಸ್ಫೋಟದಿಂದ ಗಂಭೀರ ಗಾಯಗೊಂಡಿದ್ದರು. ಅವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದು, ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಗುಜರಿ ವಸ್ತುಗಳನ್ನು ಒಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ಎಎನ್‌ಐ ಸುದ್ಗಿ ಸಂಸ್ಥೆ ಹೇಳಿದೆ. 

ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕಿೃಯ ದಳ ಆಗಮಿಸಿದ್ದು, ತನಿಖೆ ಮುಂದುವರಿದಿದೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !