ಮೋದಿ ಚಿತ್ರ: ಅಧಿಕಾರಿಗಳ ಅಮಾನತು

ಮಂಗಳವಾರ, ಏಪ್ರಿಲ್ 23, 2019
31 °C

ಮೋದಿ ಚಿತ್ರ: ಅಧಿಕಾರಿಗಳ ಅಮಾನತು

Published:
Updated:

ನವದೆಹಲಿ: ಮೋದಿ ಅವರ ಭಾವಚಿತ್ರವಿರುವ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ವಿತರಿಸಿದ ನಾಲ್ವರು ಅಧಿಕಾರಿಗಳನ್ನು ರೈಲ್ವೆ ಇಲಾಖೆಯು ಮಂಗಳವಾರ ಅಮಾನತುಗೊಳಿಸಿದೆ.

ಮೋದಿ ಅವರ ಭಾವಚಿತ್ರವಿರುವ ಟಿಕೆಟ್‌ಗಳನ್ನು ವಿತರಿಸದಂತೆ ರೈಲ್ವೆ ಇಲಾಖೆಯು ಎಲ್ಲಾ ವಲಯ ಕಚೇರಿಗಳಿಗೆ ಹಿಂದೆಯೇ ಸೂಚನೆ ನೀಡಿದ್ದರೂ ಬಾರಾಬಂಕಿ ರೈಲು ನಿಲ್ದಾಣದಲ್ಲಿ ಕೆಲವು ಗ್ರಾಹಕರಿಗೆ ಇಂಥ ಟಿಕೆಟ್‌ಗಳನ್ನು ನೀಡಲಾಗಿತ್ತು. ಆ ಕಾರಣಕ್ಕೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಕ್ಲರ್ಕ್‌ಗಳು ಹಾಗೂ ಇಬ್ಬರು ಅಧಿಕಾರಿಗಳನ್ನು ಲಖನೌ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋದಿ ಚಿತ್ರವಿರುವ ಟಿಕೆಟ್‌ ಮಾತ್ರವಲ್ಲ, ರೈಲುಗಳಲ್ಲಿ ಮೋದಿ ಅವರ ಭಾವಚಿತ್ರವಿರುವ ಕಪ್‌ಗಳಲ್ಲಿ ಚಹಾ ವಿತರಣೆ ಮಾಡುವುದನ್ನೂ ನಿಲ್ಲಿಸುವಂತೆ ಹಿಂದೆ ಚುನಾವಣಾ ಆಯೋಗವು ಇಲಾಖೆಗೆ ಸೂಚನೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !