ಇಳಿಕೆ ಹಾದಿಯಲ್ಲಿ ಪಯಣ ಮುಂದುವರಿಸಿದೆ ತೈಲ ಬೆಲೆ

7

ಇಳಿಕೆ ಹಾದಿಯಲ್ಲಿ ಪಯಣ ಮುಂದುವರಿಸಿದೆ ತೈಲ ಬೆಲೆ

Published:
Updated:

ನವದೆಹಲಿ: ಏರಿಕೆ ಹಾದಿಯಲ್ಲಿದ್ದ ಇಂಧನ ದರ ಈಗ ಇಳಿಕೆಯ ಹಾದಿ ಹಿಡಿದಿದ್ದು, ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ. ಸೋಮವಾರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ ₹78.56 ಹಾಗೂ ಡೀಸೆಲ್‌ಗೆ ₹73.16 ದರವಿದೆ.

ಸೋಮವಾರ ಪೆಟ್ರೋಲ್‌ ದರ 22 ಪೈಸೆ ಹಾಗೂ ಡೀಸೆಲ್‌ ದರ 20 ಪೈಸೆ ಇಳಿಕೆಯಾಗಿದೆ. ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ಗೆ ₹84.06, ಡೀಸೆಲ್​ಗೆ ₹76.67 ಆಗಿದೆ. ಕಳೆದ ತಿಂಗಳು ಮುಂಬೈನಲ್ಲಿ ಪೆಟ್ರೋಲ್‌ ದರ 90ರ ಗಡಿ ದಾಟಿತ್ತು. 

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಪೆಟ್ರೋಲ್‌ 22 ಪೈಸೆ, ಡೀಸೆಲ್‌ 17 ಪೈಸೆ ಇಳಿದಿದ್ದು, ಪೆಟ್ರೋಲ್‌ ಲೀಟರ್‌ಗೆ ₹79.41 ಆಗಿದೆ.

ಆಗಸ್ಟ್ 16ರ ನಂತರ ತೈಲ ದರ ಏರಿಕೆ ಆರಂಭವಾಗಿತ್ತು. ಅಲ್ಲಿಂದ ಅಕ್ಟೋಬರ್​ 4ರವರೆಗೆ ಪೆಟ್ರೋಲ್ ದರದಲ್ಲಿ ಬರೋಬ್ಬರಿ ₹6.86 ಹಾಗೂ ಡೀಸೆಲ್​ಗೆ ₹6.73 ಏರಿಕೆಯಾಗಿತ್ತು. ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ಒಂದೂವರೆ ರುಪಾಯಿ ಕಡಿತಗೊಳಿದ ನಂತರ ದರ ಇಳಿಕೆ ಹಾದಿಯಲ್ಲಿ ಸಾಗುತ್ತಿದೆ.

ರಾಜ್ಯ ಸರ್ಕಾರಗಳು ಕೂಡ ಇಂಧನದ ಮೇಲೆ ಸಬ್ಸಿಡಿ ನೀಡುವಂತೆ ಸೂಚನೆ ನೀಡಿತ್ತು. ಅದರಂತೆ ಹಲವು ರಾಜ್ಯ ಸರ್ಕಾರಗಳು ಲೀಟರ್​ಗೆ ₹1 ಇಳಿಕೆ ಮಾಡಿದ್ದವು.

ವಿವಿಧ ರಾಜ್ಯಗಳಲ್ಲಿ  ಅ.5ರಂದು ಪ್ರತಿ ಲೀಟರ್‌ ತೈಲ ದರ (₹ ಗಳಲ್ಲಿ)

ರಾಜ್ಯ; ಪೆಟ್ರೋಲ್‌; ಡೀಸೆಲ್‌

ಕರ್ನಾಟಕ ; 79.07; 73.44

ತಮಿಳುನಾಡು ; 82.29 ;  78.00

ಆಂಧ್ರಪ್ರದೇಶ ; 85.81 ; 78.56

ತೆಲಂಗಾಣ ; 83.53 ; 79.82

ಮಹಾರಾಷ್ಟ್ರ  ; 84.62 ;  76.62

ಕೇರಳ ; 80.96 ; 77.55

Tags: 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !