ಗೆಳೆಯರ ಕಣ್ಣೀರು, ಅಭಿಮಾನಿಗಳ ಜಯಘೋಷದ ನಡುವೆ ಅಗ್ನಿಸ್ಪರ್ಶ

7

ಗೆಳೆಯರ ಕಣ್ಣೀರು, ಅಭಿಮಾನಿಗಳ ಜಯಘೋಷದ ನಡುವೆ ಅಗ್ನಿಸ್ಪರ್ಶ

Published:
Updated:

ನವದೆಹಲಿ: ಯಮುನಾ ನದಿ ದಂಡೆಯ ಮೇಲಿರುವ ಸ್ಮೃತಿಸ್ಥಳಕ್ಕೆ ಶುಕ್ರವಾರ ಸಂಜೆ ಅಟಲ್‌ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರವನ್ನು ತರಲಾಯಿತು. ಅಗ್ನಿಸ್ಪರ್ಶನದ ಮೂಲಕ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆದವು.. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದಾರೆ.

ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದರು. ಸೇನಾಪಡೆಗಳು ಶೋಕ ಸಂಗೀತ ಮೊಳಗಿಸಿದವು. ವಾಜಪೇಯಿ ಅವರ ಬಹುಕಾಲದ ಗೆಳೆಯ ಎಲ್‌.ಕೆ.ಆಡ್ವಾಣಿ ಸೇರಿದಂತೆ ಸ್ಮೃತಿ ಸ್ಥಳದಲ್ಲಿ ನೆರೆದಿದ್ದವರು ಹನಿಗಣ್ಣಾದರು.

ವಾಜಪೇಯಿ ಅವರ ಸ್ವಗೃಹದಿಂದ ಪಾರ್ಥೀವ ಶರೀರವನ್ನು ಮುಂಜಾನೆ ಬಿಜೆಪಿ ಕಚೇರಿಗೆ ಸ್ಥಳಾಂತರಿಸಲಾಯಿತು. ಪಕ್ಷಭೇದ ಮರೆತು ಹಲವು ಹಿರಿಯ ನಾಯಕರು ಅಲ್ಲಿ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು. ರಾಷ್ಟ್ರಧ್ವಜ ಹೊದೆಸಿದ್ದ ಪಾರ್ಥೀವ ಶರೀರವನ್ನು ಅಲ್ಲಿಂದ ಮೆರವಣಿಗೆಯಲ್ಲಿ ಸ್ಮೃತಿ ಸ್ಥಳಕ್ಕೆ ತರಲಾಯಿತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರು ನಡೆದುಬಂದರು.

ತಾರಾ ವರ್ಚಸ್ಸು ಇದ್ದ ಬಿಜೆಪಿಯ ನಾಯಕ ಅಟಲ್‌ ಬಿಹಾರಿ ವಾಜಪೇಯಿ (93) ಗುರುವಾರ ಸಂಜೆ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾದರು. ನಮಿತಾ ಕೌಲ್ ಭಟ್ಟಾಚಾರ್ಯ ಅವರನ್ನು ವಾಜಪೇಯಿ ದತ್ತು ಪಡೆದಿದ್ದರು. ಸರ್ಕಾರ ಏಳು ದಿನಗಳ ಶೋಕಾಚರಣೆ ಘೋಷಿಸಿದೆ. ದೇಶದೆಲ್ಲೆಡೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !