ನಕ್ಸಲರ ನಿರ್ನಾಮಕ್ಕೆ ಮಹಾರಾಷ್ಟ್ರ ಪಣ: ಕೇಸರ್ಕರ್‌

ಶನಿವಾರ, ಮೇ 25, 2019
27 °C
ಮಹಾರಾಷ್ಟ್ರ ಗೃಹ ಸಚಿವ ದೀಪಕ್‌ ಕೇಸರ್ಕರ್‌ ಘೋಷಣೆ

ನಕ್ಸಲರ ನಿರ್ನಾಮಕ್ಕೆ ಮಹಾರಾಷ್ಟ್ರ ಪಣ: ಕೇಸರ್ಕರ್‌

Published:
Updated:
Prajavani

ನಾಗ್ಪುರ: ‘ಗಡ್‌ಚಿರೋಲಿಯಲ್ಲಿ ಬುಧವಾರ ನಡೆದ ನಕ್ಸಲರ ದಾಳಿ ದುರದೃಷ್ಟಕರ. ನಮ್ಮ ಸರ್ಕಾರವು ರಾಜ್ಯದಿಂದ ನಕ್ಸಲರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಿದೆ’ ಎಂದು ಗೃಹಸಚಿವ ದೀಪಕ್‌ ಕೇಸರ್ಕರ್‌ ಘೋಷಿಸಿದ್ದಾರೆ. 

‘ವೀರಯೋಧರ ಸಾವಿಗೆ ನಾವು ತಕ್ಕ ಉತ್ತರ ನೀಡುತ್ತೇವೆ. ಯೋಧರ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಲು ಪದಗಳೇ ಸಾಲುತ್ತಿಲ್ಲ’ ಎಂದು ಅವರು ದುಃಖ ವ್ಯಕ್ತಪಡಿಸಿದ್ದರು. 

ಗಡ್‌ಚಿರೋಲಿಯಲ್ಲಿ ಸ್ಮಶಾನ ಮೌನ: ಜಿಲ್ಲೆಯಲ್ಲಿ ಗುರುವಾರ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಬಾಗಿಲು ಮುಚ್ಚಿದ್ದವು. ಗಡ್‌ಚಿರೋಲಿಯ ಮಾರುಕಟ್ಟೆ ಪ್ರದೇಶಗಳಲ್ಲಿ ಸ್ಮಶಾನ ಮೌನ ಆವರಿಸಿತ್ತು. ಸ್ವಯಂಪ್ರೇರಿತವಾಗಿ ವಹಿವಾಟು ಸ್ಥಗಿತಗೊಳಿಸುವ ಮೂಲಕ ವರ್ತಕರು, ಅಗಲಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 

ನಕ್ಸಲ್‌ರಿಂದ ಇಬ್ಬರ ಹತ್ಯೆ: ಸುಕ್ಮ (ಪಿಟಿಐ): ಪೊಲೀಸರಿಗೆ ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ವ್ಯಕ್ತಿಗಳನ್ನು ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

ಪೋಡಿಯಂ ಮುತ್ತ ಮತ್ತು ಕೊಕ್ಕೊ ಲಚ್ಚು ಹತ್ಯೆಗೀಡಾದರು. ಕರಿಗುಂಡಮ್‌ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ನಕ್ಸಲರ ಗುಂಪೊಂದು ಈ ದಾಳಿ ನಡೆಸಿ, ಗ್ರಾಮಸ್ಥರ ಮುಂದೆಯೇ ಈ ಇಬ್ಬರನ್ನು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !