ಶನಿವಾರ, ಮೇ 28, 2022
26 °C

ಗಂಭೀರ್‌ಗೆ ಕ್ರಿಕೆಟಿಗರ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ವಿರುದ್ಧ ಅಶ್ಲೀಲ ಕರಪತ್ರ ಹಂಚಿದರು ಎಂಬ ಆರೋಪ ಕುರಿತಂತೆ ಮಾಜಿ ಕ್ರಿಕೆಟಿಗ, ಗೌತಮ್‌ ಗಂಭೀರ್‌ ಅವರಿಗೆ ಕ್ರಿಕೆಟಿಗರಾದ ವಿ.ವಿ.ಎಸ್‌.ಲಕ್ಷ್ಮಣ್ ಮತ್ತು ಹರಭಜನ್‌ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ತಮ್ಮ ಬಗ್ಗೆ ಅಶ್ಲೀಲ ಮತ್ತು ಮಾನಹಾನಿಕರ ವಿಚಾರಗಳಿದ್ದ ಕರಪತ್ರಗಳನ್ನು ಗಂಭೀರ್‌ ಹಂಚಿದ್ದಾರೆ ಎಂದು ಎಎಪಿ ಅಭ್ಯರ್ಥಿ ಆತಿಶಿ ಮರ್ಲಿನಾ ಅವರು ಗುರುವಾರ ಆರೋಪ ಮಾಡಿದ್ದರು. 

‘ನಿನ್ನೆಯ ಬೆಳವಣಿಗೆಗಳನ್ನು ಕಂಡು ನಮಗೆ ದಿಗ್ಭ್ರಮೆಯಾಗಿದೆ. ಗಂಭೀರ್‌ ಅವರು ಎರಡು ದಶಕಗಳಿಂದಲೂ ನಮಗೆ ಗೊತ್ತಿದ್ದಾರೆ. ಅವರ ವ್ಯಕ್ತಿತ್ವ, ಮಹಿಳೆಯರ ಬಗ್ಗೆ ಅವರಿಗಿರುವ ಗೌರವವನ್ನು ನಾವು ದೃಢಪಡಿಸುತ್ತೇವೆ’ ಎಂದು ಲಕ್ಷ್ಮಣ್‌ ಹೇಳಿದ್ದಾರೆ. ‘ಮಹಿಳೆಯರ ಬಗ್ಗೆ ಅವರು ಎಂದೂ ಹಗುರವಾಗಿ ಮಾತನಾಡಿಲ್ಲ. ಅವರು ಗೆಲ್ಲುತ್ತಾರೋ, ಸೋಲುತ್ತಾರೋ ಎಂಬುದು ಬೇರೆ ವಿಷಯ. ಆದರೆ, ವ್ಯಕ್ತಿ ಅದನ್ನು ಮೀರಿದವರು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು