ಭಾನುವಾರ, ಡಿಸೆಂಬರ್ 8, 2019
21 °C

'ಪಾಕ್‍ಗೆ ನೀಡಲಾಗಿದ್ದ MFNನಲ್ಲಿ 'F' ಏನು ಎಂಬುದನ್ನು ನಾವು ನಿರ್ಧರಿಸುತ್ತೇವೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪುಲ್ವಾಮ ದಾಳಿ ಬಳಿಕ ಸಂಪುಟದ ಭದ್ರತಾ ಸಮಿತಿಯು ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಸಿ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿತ್ತು. ಈ ಸಭೆಯಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿದ್ದ ಅತಿ ಅನುಕೂಲಿಕ ರಾಷ್ಟ್ರ (MFN- most-favoured nation)  ಸ್ಥಾನವನ್ನು ಹಿಂದಕ್ಕೆ ಪಡೆಯಲಾಗಿದೆ.

ಈ ಸುದ್ದಿಯನ್ನು ಟ್ವೀಟಿಸಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಪಾಕಿಸ್ತಾನಕ್ಕೆ ಒಂದು ಸುದ್ದಿ ಇದೆ. ನಾವು ನಿಮಗೆ ನೀಡಿದ್ದ MFN ಸ್ಥಾನವನ್ನು ಮುಂದುವರಿಸುತ್ತೇವೆ.  ಅದರೆ ಒಂದೇ ಒಂದು ವಿಷಯ ಏನೆಂದರೆ ಇದರಲ್ಲಿರುವ F ಅಕ್ಷರದ ಪೂರ್ಣರೂಪ ಏನೆಂಬುದನ್ನು ನಾವು ನಾಗರಿಕರು ತೀರ್ಮಾನಿಸುತ್ತೇವೆ ಎಂದಿದ್ದಾರೆ.

ಇನ್ನೊಂದು ಟ್ವೀಟ್‍ನಲ್ಲಿ ನಮ್ಮ ಯೋಧರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಲಾಗಿದೆ. ಹೀಗಿರುವಾಗ ಹುರಿಯಕ್ ನಾಯಕರಿಗೆ ಭದ್ರತೆ ಯಾಕೆ ನೀಡಬೇಕು? ಎಂದು ಗಂಭೀರ್ ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು