ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪಾಕ್‍ಗೆ ನೀಡಲಾಗಿದ್ದ MFNನಲ್ಲಿ 'F' ಏನು ಎಂಬುದನ್ನು ನಾವು ನಿರ್ಧರಿಸುತ್ತೇವೆ'

Last Updated 16 ಫೆಬ್ರುವರಿ 2019, 16:12 IST
ಅಕ್ಷರ ಗಾತ್ರ

ನವದೆಹಲಿ:ಪುಲ್ವಾಮ ದಾಳಿ ಬಳಿಕ ಸಂಪುಟದ ಭದ್ರತಾ ಸಮಿತಿಯು ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಸಿ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿತ್ತು. ಈ ಸಭೆಯಲ್ಲಿಪಾಕಿಸ್ತಾನಕ್ಕೆ ನೀಡಲಾಗಿದ್ದ ಅತಿ ಅನುಕೂಲಿಕ ರಾಷ್ಟ್ರ (MFN- most-favoured nation) ಸ್ಥಾನವನ್ನು ಹಿಂದಕ್ಕೆ ಪಡೆಯಲಾಗಿದೆ.

ಈ ಸುದ್ದಿಯನ್ನು ಟ್ವೀಟಿಸಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಪಾಕಿಸ್ತಾನಕ್ಕೆ ಒಂದು ಸುದ್ದಿ ಇದೆ.ನಾವು ನಿಮಗೆ ನೀಡಿದ್ದMFN ಸ್ಥಾನವನ್ನು ಮುಂದುವರಿಸುತ್ತೇವೆ. ಅದರೆ ಒಂದೇ ಒಂದು ವಿಷಯ ಏನೆಂದರೆ ಇದರಲ್ಲಿರುವ F ಅಕ್ಷರದ ಪೂರ್ಣರೂಪ ಏನೆಂಬುದನ್ನು ನಾವು ನಾಗರಿಕರು ತೀರ್ಮಾನಿಸುತ್ತೇವೆ ಎಂದಿದ್ದಾರೆ.

ಇನ್ನೊಂದು ಟ್ವೀಟ್‍ನಲ್ಲಿ ನಮ್ಮ ಯೋಧರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಲಾಗಿದೆ.ಹೀಗಿರುವಾಗ ಹುರಿಯಕ್ ನಾಯಕರಿಗೆ ಭದ್ರತೆ ಯಾಕೆ ನೀಡಬೇಕು? ಎಂದು ಗಂಭೀರ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT