ಗಾಂಧೀಜಿಗೂ ಕೇಸರಿ ಬಣ್ಣ!

7

ಗಾಂಧೀಜಿಗೂ ಕೇಸರಿ ಬಣ್ಣ!

Published:
Updated:

ಲಖನೌ: ಉತ್ತರ ಪ್ರದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಪ್ರತಿಮೆಗೆ ಈ ಹಿಂದೆ ಕೇಸರಿ ಬಣ್ಣ ಬಳಿದಿದ್ದ ಕೇಸರಿಪ್ರಿಯರು, ಈಗ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನೂ ಬಿಟ್ಟಿಲ್ಲ. ಶಹಜಹಾನ್‌ಪುರ ಜಿಲ್ಲೆಯಲ್ಲಿನ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಗಾಂಧೀಜಿ ಪ್ರತಿಮೆಗೆ ಕೇಸರಿಬಣ್ಣ ಬಳಿಯಲಾಗಿದೆ. 

ಈ ಕುರಿತು ಉತ್ತರ ಪ್ರದೇಶದ ಮಾಧ್ಯಮಗಳು ವರದಿ ಮಾಡಿವೆ. 

ಢಾಕಾ ಘನಶ್ಯಾಂಪುರ ಗ್ರಾಮದಲ್ಲಿನ ಪ್ರತಿಮೆಗೆ ಕೇಸರಿ ಬಣ್ಣ ಬಳಿದಿರುವುದನ್ನು ಸ್ಥಳೀಯರು ಪಂಚಾಯ್ತಿಯ ಗಮನಕ್ಕೆ ತಂದಿದ್ದಾರೆ. ಜಿಲ್ಲಾಧಿಕಾರಿ ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. 

‘ಬಿಜೆಪಿಗೂ, ಈ ಪ್ರಕರಣಕ್ಕೂ ಸಂಬಂಧವಿಲ್ಲ. ಪ್ರತಿಮೆಗಳಿಗೆ ಕೇಸರಿ ಬಣ್ಣ ಬಳಿಯುವ ಮನಸ್ಥಿತಿ ನಮ್ಮದಲ್ಲ. ಸ್ಥಳೀಯರೇ ಈ ಬಣ್ಣ ಬಳಿದು, ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಬಿಜೆಪಿ ಪ್ರಾದೇಶಿಕ ಘಟಕದ ಅಧ್ಯಕ್ಷ ರಾಕೇಶ ಅನಾವ ಪ್ರತಿಕ್ರಿಯಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !