ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ವಾಣಿ ಬದಲು ಅಮಿತ್ ಅಖಾಡಕ್ಕೆ: ಗಾಂಧಿನಗರ ಕ್ಷೇತ್ರಕ್ಕೆ ಇಂದು ನಾಮಪತ್ರ ಸಲ್ಲಿಕೆ

ಲೋಕಸಭೆ ಚುನಾವಣೆ
Last Updated 30 ಮಾರ್ಚ್ 2019, 6:30 IST
ಅಕ್ಷರ ಗಾತ್ರ

ಗಾಂಧಿನಗರ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಇಂದು(ಶನಿವಾರ) ಗಾಂಧಿನಗರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಬಲ ಪ್ರದರ್ಶನಕ್ಕೆ ಬೃಹತ್‌ ವೇದಿಕೆ ಸಿದ್ಧವಾಗಿದೆ.

ಸಮಾವೇಶದಲ್ಲಿ ಶಿವಸೇನಾ, ಶಿರೋಮಣಿ ಅಕಾಲಿ ದಳ, ಲೋಕ ಜನಶಕ್ತಿ ಸೇರಿದಂತೆ ಎನ್‌ಡಿಎ ಮೈತ್ರಿ ಪಕ್ಷಗಳ ನಾಯಕರು, ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಹಾಜರಾಗಿದ್ದು, ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೂ ಆಗಮಿಸಲಿದ್ದಾರೆ.

ಈ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವರಾಜನಾಥ್‌ ಸಿಂಗ್‌,ಬಹುಕಾಲದವರಗೆಎಲ್‌ಕೆ ಅಡ್ವಾಣಿಯವರು ಪ್ರತಿನಿಧಿಸಿದ್ದಗಾಂಧಿನಗರ ಲೋಕಸಭಾ ಕ್ಷೇತ್ರದ ರಾಜಕೀಯ ಹೊಣೆಗಾರಿಕೆಯನ್ನು ಅಮಿತ್ ಶಾ ವಹಿಸಿಕೊಂಡಿದ್ದಾರೆ ಎಂದು ವ್ಯಾಖ್ಯಾನಿಸಿದರು.

ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರು 1998ರಿಂದ 2014ರ ಚುನಾವಣೆಗಳಲ್ಲಿ ಗೆಲುವು ಕಂಡಿದ್ದರು. ಈ ಬಾರಿ ಅವರ ಬದಲು ಅಮಿತ್‌ ಶಾ ಕಣಕ್ಕಿಳಿಯಲಿದ್ದಾರೆ.

‘ಇಂದು ನಾವು ಒಂದು ಮಾದರಿ, ಒಬ್ಬ ನಾಯಕನನ್ನು ಹೊಂದಿದ್ದೇವೆ. ಈಗ ಜನರು ‘ಮೋದಿ, ಮೋದಿ’ ಘೋಷಣೆ ಕೂಗುತ್ತಾರೆ. ಅವರ ವಿರುದ್ಧ ಪ್ರಧಾನಿ ಸ್ಥಾನಕ್ಕೆಪ್ರತಿಪಕ್ಷಗಳ ಅಭ್ಯರ್ಥಿ ಯಾರು? ಅವರು(ಪ್ರತಿಪಕ್ಷಗಳು) ಇಂಥ ರ್ಯಾಲಿಯನ್ನು ನಡೆಸಲು ಸಾಧ್ಯವಿದೆಯಾ? ಒಬ್ಬಸಾಮಾನ್ಯ ನಾಯಕನ ಪರವಾಗಿ ಘೋಷಣೆ ಕೂಗಲು ಅವರ ಬೆಂಬಲಿಗರಿಗೆ ಹೇಳಲು ಸಾಧ್ಯವೇ?’ ಎಂದುಶಿವಸೇನಾ ನಾಯಕಉದ್ದವ್‌ ಠಾಕ್ರೆ ಗುಡುಗಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗುಜರಾತ್‌ ಬಿಜೆಪಿ ಘಟಕದ ಅಧ್ಯಕ್ಷ ಜಿತು ವಘಾನಿ, ಸರ್ದಾರ್‌ ಪಟೇಲ್‌ ಪ್ರತಿಮೆ ಇರುವ ಅಹ್ಮದಾಬಾದ್‌ನ ನರಾನ್ಪುರ ಪ್ರದೇಶದಿಂದ ಘಟ್ಲೋಡಿಯಾ ಪ್ರದೇಶದಲ್ಲಿರುವ ಪಾಟೀದಾರ್‌ ಚೌಕ್‌ವರೆಗೆ ಒಟ್ಟು ನಾಲ್ಕು ಕಿ.ಮೀ ರ್ಯಾಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಶಾ ಈ ಮೊದಲು ಗುಜರಾತ್‌ನಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ನಾಮಪತ್ರ ಸಲ್ಲಿಕೆಗೆ ಏಪ್ರಿಲ್‌ 4 ಕೊನೆಯ ದಿನವಾಗಿದ್ದು, ಒಟ್ಟು 23 ಲೋಕಸಭೆ ಸ್ಥಾನಗಳಿಗೆ ಏಪ್ರಿಲ್‌ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT