ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಿರುದ್ಧದ ಹೋರಾಟ: ಮೋದಿ ಹೊಗಳಿದ ಬಿಲ್‌‌ ಗೇಟ್ಸ್‌

Last Updated 23 ಏಪ್ರಿಲ್ 2020, 9:28 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್‌ (ಕೋವಿಡ್‌–19) ರೋಗವನ್ನು ಎದುರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಲಾಕ್ ಡೌನ್, ರೋಗ ಪತ್ತೆ ಪರೀಕ್ಷೆಯ ವಿಸ್ತರಣೆಯಂಥ ಭಾರತ ಸರ್ಕಾರದ ಕ್ರಮಗಳ ಬಗ್ಗೆಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಪತ್ರ ಬರೆದು ಶ್ಲಾಘಿಸಿದ್ದಾರೆ.

‘ಭಾರತ ಸರ್ಕಾರವು ತನ್ನ ಅಸಾಧಾರಣ ಡಿಜಿಟಲ್ ಸಾಮರ್ಥ್ಯವನ್ನು ಕೋವಿಡ್‌ ಹೋರಾಟದಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಕೊರೊನಾ ವೈರಸ್‌ ಮೇಲೆ ನಿಗಾ ಇಡಲು, ಸಂಪರ್ಕ ಪತ್ತೆ ಹಚ್ಚುವ ಸಲುವಾಗಿ 'ಆರೋಗ್ಯ ಸೇತು' ಆ್ಯಪ್‌ ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಜನರಿಗೆ ಆರೋಗ್ಯ ಸೇವೆ ಕಲ್ಪಿಸುತ್ತಿದೆ,’ ಎಂದು ಹೊಗಳಿ ಗೇಟ್ಸ್‌ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಕೊರೊನಾ ವೈರಸ್‌ನ ಏರುಗತಿಯ ರೇಖೆಯನ್ನು ಕೆಳಗಿಳಿಸುವ ನಿಟ್ಟಿನಲ್ಲಿ ನೀವು ಮತ್ತು ನಿಮ್ಮ ಸರ್ಕಾರ ಕೈಗೊಂಡ ಪೂರ್ವಭಾವಿ ಕ್ರಮಗಳನ್ನು ನಾನು ಪ್ರಶಂಸಿಸುತ್ತೇನೆ,’ ಎಂದೂ ಗೇಟ್ಸ್‌ ಬರೆದಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT